ಕೊರೊನಾ ತಡೆಗಟ್ಟುವಲ್ಲಿ ಸಹಭಾಗಿತ್ವವೂ ಬಹುಮುಖ್ಯ

ಕೊರೊನಾ ತಡೆಗಟ್ಟುವಲ್ಲಿ ಸಹಭಾಗಿತ್ವವೂ ಬಹುಮುಖ್ಯ

ರಾಣೇಬೆನ್ನೂರು, ಅ.21- ಕೊರೊನಾ ತಡೆಗಟ್ಟುವಲ್ಲಿ ಸರ್ಕಾರದ ಜತೆ ಸಮುದಾಯದ ಸಹಭಾಗಿತ್ವವೂ ಬಹುಮುಖ್ಯವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಕಲ್ಯಾಣಿ ಹೇಳಿದರು. 

ನಗರದ ರೋಟರಿ ಶಾಲೆಯಲ್ಲಿ ಸ್ಥಳೀಯ ರೋಟರಿ ಮತ್ತು ಇನ್ನರ್‍ವ್ಹೀಲ್ ಕ್ಲಬ್‍ಗಳ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಗಳಿಗೆ ಪಿಪಿಇ ಕಿಟ್ ಹಾಗೂ ಸ್ಯಾನಿಟೈಸರ್ ಹಸ್ತಾಂತರಿಸಿ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ್, ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ವಿನುತಾ ಕಲ್ಯಾಣಿ, ರೋಹಿತ್ ಅಗರವಾಲ್, ಶ್ರೀನಿವಾಸ್ ಗುಪ್ತಾ, ಡಾ.ಬಸವರಾಜ ಕೇಲಗಾರ, ಉಮೇಶ ಹೊನ್ನಾಳಿ, ಕೆ.ವಿ.ಶ್ರೀನಿವಾಸ್, ಪೂಜಾ ವಿರುಪಣ್ಣನವರ, ವೀರೇಶ್ ಹನಗೋಡಿಮಠ, ವೀರೇಶ್ ಮೋಟಗಿ, ಪಿಎಸ್‍ಐ ಕೆ.ಸಿ.ಕೋಮಲಾಚಾರ್ ಮತ್ತಿತರರಿದ್ದರು.

Leave a Reply

Your email address will not be published.