ಬಿ.ಸಿ.ಉಮಾಪತಿ ಅವರ ಮನೆಗೆ ಗೃಹಮಂತ್ರಿ ಬೊಮ್ಮಾಯಿ ಭೇಟಿ

ಬಿ.ಸಿ.ಉಮಾಪತಿ ಅವರ ಮನೆಗೆ  ಗೃಹಮಂತ್ರಿ ಬೊಮ್ಮಾಯಿ ಭೇಟಿ

ದಾವಣಗೆರೆ, ಅ.20- ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಬೆಳಿಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗಮಧ್ಯೆ ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿಯೂ ಆದ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಅವರ ನಿವಾಸಕ್ಕೆ ಸೌಹಾರ್ದ ಭೇಟಿ ನೀಡಿದ್ದರು. 

ರಾಣೇಬೆನ್ನೂರು ಶಾಸಕ ಅರುಣ್‌ಕುಮಾರ ಪೂಜಾರ ಅವರು ಬೊಮ್ಮಾಯಿ ಅವರೊಂದಿಗಿದ್ದರು. ಬಿ.ಸಿ. ಉಮಾಪತಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಗಿರಿಜಾ ದಂಪತಿ ಹಾಗೂ ಕುಟುಂಬದ
ಸದಸ್ಯರು ಬೊಮ್ಮಾಯಿ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಸತ್ಕರಿಸಿ, ಬೀಳ್ಕೊಟ್ಟರು.

Leave a Reply

Your email address will not be published.