ಪಂಚಮಸಾಲಿ ಪೀಠದಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ

ಪಂಚಮಸಾಲಿ ಪೀಠದಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ

ಹರಿಹರ, ಅ.20- ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ವಿಜಯದಶಮಿ ಮತ್ತು ನವರಾತ್ರಿ ಅಂಗವಾಗಿ ನವದುರ್ಗೆಯರ ಪ್ರತಿಷ್ಠಾಪನೆ ಮತ್ತು ಪೂಜಾ ಕೈಂಕರ್ಯಗಳನ್ನು ಜಿಲ್ಲಾ ಮತ್ತು ನಗರ ಹರಿಹರ ತಾಲ್ಲೂಕು ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ನಡೆಸಲಾಯಿತು.

ಘಟಸ್ಥಾಪನೆಯನ್ನು ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ  ಮತ್ತು ಶ್ರೀಮತಿ ಗಿರಿಜಾ ಉಮಾಪತಿ ದಂಪತಿ ಚಾಲನೆ ನೀಡಿದರು. ಶ್ರೀ ಪೀಠದಲ್ಲಿ ನವದುರ್ಗ ಆರಾಧನೆ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್, ಹರಿಹರ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸಂಗೀತ ಗಣೇಶ್, ದಾವಣಗೆರೆ ನಗರ ಅಧ್ಯಕ್ಷರಾದ ಶ್ರೀಮತಿ ವಾಣಿ ಗುರು, ಶ್ರೀಮತಿ ಶಶಿಕಲಾ ಶಿವಲಿಂಗಪ್ಪ, ಶ್ರೀಮತಿ ವೀಣಾ ಕೊಟ್ರೇಶ್, ಶ್ರೀಮತಿ ಕೊಟ್ರಮ್ಮ ಮುರುಗೇಶ್, ಶ್ರೀಮತಿ ನಾಗವೇಣಿ, ಶ್ರೀಮತಿ ಐಗೂರ್ ಗೌರಮ್ಮ, ಶ್ರೀಮತಿ ವೇದ, ಶ್ರೀಮತಿ ಮಂಜುಳ ಮಹೇಶ್, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಸಂತ ಹುಲ್ಲತ್ತಿ, ಶ್ರೀಮತಿ ಪೂರ್ಣಿಮಾ ಬೆನ್ನೂರ್, ಶೋಭಾ ಕವಲೆತ್ತು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.