ಹರಿಹರ ತಾ. ರೈತರಿಂದ ಭದ್ರೆಗೆ ಬಾಗಿನ

ಹರಿಹರ ತಾ. ರೈತರಿಂದ ಭದ್ರೆಗೆ ಬಾಗಿನ

ಮಲೇಬೆನ್ನೂರು, ಅ.18- ಸತತವಾಗಿ ಭರ್ತಿ ಯಾಗಿರುವ ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯಕ್ಕೆ ಹರಿಹರ ತಾಲ್ಲೂಕಿನ ರೈತರು ಆದಿಚುಂಚನಗಿರಿ ಮಠದ ಆಡಳಿತಾಧಿ ಕಾರಿ ಡಾ. ಜೆ.ಎನ್. ರಾಮಕೃಷ್ಣೇಗೌಡ್ರು, ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೀರಭದ್ರಪ್ಪ ಅವರ ಸಮ್ಮುಖದಲ್ಲಿ ಇಂದು ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮ ಕೃಷ್ಣೇಗೌಡ್ರು, ಭದ್ರಾ ಜಲಾಶಯ ಸತತವಾಗಿ ಭರ್ತಿಯಾಗುತ್ತಿರುವುದರಿಂದ ಹರಿಹರ ತಾಲ್ಲೂ ಕಿನ ರೈತರು ಚಿತ್ರದುರ್ಗ ಬಳಿ ಇರುವ ಆದಿಚುಂಚ ನಗಿರಿ ಮಠದ ಗೋಶಾಲೆಗೆ ಪ್ರತಿ ಬೆಳೆಗೂ ಕನಿಷ್ಠ 80-100 ಲೋಡ್‌ ಭತ್ತದ ಹುಲ್ಲನ್ನು ಉಚಿತ ವಾಗಿ ನೀಡುತ್ತಿದ್ದಾರೆ. ಗೋಮಾತೆಗೆ ನೆರವಾಗಿ ರುವ ರೈತರು ಸದಾ ಸಮೃದ್ಧಿಯಾಗಿರಲಿ, ದೇಶ ಕೊರೊನಾದಿಂದ ಮುಕ್ತಿ ಹೊಂದಲಿ. ಪ್ರತಿ ವರ್ಷ ಉತ್ತಮ ಮಳೆಯಾಗಿ ನಾಡಿನ ಎಲ್ಲಾ ಜಲಾಶಯ ಗಳು ಭರ್ತಿಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಕುಲಪತಿ ಪ್ರೊ. ವೀರಭದ್ರಪ್ಪ ಮಾತನಾಡಿ, ರೈತ ಮತ್ತು ಸೈನಿಕ ಈ ದೇಶದ ಎರಡು ಕಣ್ಣುಗಳು ಇದ್ದಂತೆ. ಇಬ್ಬರನ್ನೂ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ. ಭದ್ರಾ ಜಲಾಶಯ ಪ್ರತಿ ವರ್ಷ ತುಂಬಿ ನಮ್ಮ ರೈತರು ಚನ್ನಾಗಿರಲಿ ಎಂದು ಆಶಿಸಿದರು.

ಶಿವಮೊಗ್ಗ ಎಸಿಎಫ್‌ ಹರಳಹಳ್ಳಿಯ ಬಾಲಚಂದ್ರ, ಪ್ರಗತಿಪರ ರೈತರಾದ ನಿಟ್ಟೂರಿನ ಕೆ. ಸಂಜೀವಮೂರ್ತಿ, ಇ.ಎಂ. ಮರುಳಸಿದ್ದೇಶ್, ಎಸ್‌.ಜಿ. ಪ್ರಭುದೇವ್, ಅಬ್ಬಾರಾವ್, ರೈಸ್‌ ಮಿಲ್‌ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮುಖಂಡರಾದ ಬಿ. ವೀರಯ್ಯ, ತಳಸದ ಬಸವರಾಜ್, ಕೊಕ್ಕನೂರು ಸೋಮಶೇಖರ್, ದಾವಣಗೆರೆಯ ಉದ್ಯಮಿ ಆನಂದ್‌, ದಾವಣಗೆರೆ ವಿವಿಯ ಪತ್ರಿಕೋದ್ಯಮ ವಿಭಾಗದ ಶಿವಕುಮಾರ್ ಕಣಸೋಗಿ, ನಿವೃತ್ತ ಇಂಜಿನಿಯರ್ ಓದೋ ಗಂಗಪ್ಪ, ಪತ್ರಕರ್ತರಾದ ಮಂಜುನಾಥ್ ಗೌರಕ್ಳವರ್‌, ಜಿಗಳಿ ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.