ನಗರದಲ್ಲಿ ಶ್ರೀ ಸದ್ಗುರು ಸಾಯಿಬಾಬಾರವರ 102ನೇ ಪುಣ್ಯಾರಾಧನೆ ಕಾರ್ಯಕ್ರಮ ಆರಂಭ

ನಗರದಲ್ಲಿ ಶ್ರೀ ಸದ್ಗುರು ಸಾಯಿಬಾಬಾರವರ 102ನೇ ಪುಣ್ಯಾರಾಧನೆ ಕಾರ್ಯಕ್ರಮ ಆರಂಭ

ದಾವಣಗೆರೆ,ಅ.16- ನಗರದ ಎಂ.ಸಿ. ಕಾಲೋನಿ ಎ ಬ್ಲಾಕ್ ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ ಆಶ್ರಯದಲ್ಲಿ ಶ್ರೀ ಸದ್ಗುರು ಸಾಯಿಬಾಬಾರವರ 102ನೇ ಪುಣ್ಯಾರಾಧನಾ ಮಹೋತ್ಸವವು ಇಂದು ಆರಂಭಗೊಂಡಿದ್ದು, ಇದೇ ದಿನಾಂಕ 25 ರವರೆಗೆ ನಡೆಯಲಿದೆ. 

ಜಡೇಸಿದ್ದೇಶ್ವರ ಮಠದ  ಶ್ರೀ ಶಿವಾನಂದ ಸ್ವಾಮೀಜಿ ದೀಪಾರಾಧನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಭಜನಾ ಮಂಡಳಿಯವರಿಂದ ವಿಷ್ಣು ಸಹಸ್ರ ನಾಮಾವಳಿ ಮತ್ತು ಸಾಯಿ ಭಜನೆ ಜರುಗಿತು. 

ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 5.30 ಕ್ಕೆ ಕಾಕಡಾರತಿ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ. ನಾಳೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಗಣಹೋಮ, ನವಗ್ರಹ ಪೂಜೆ, ಮಹಾಮಂಗಳಾರತಿ, ಸಂಜೆ 7 ರಿಂದ ಶ್ರೀ ಸಾಯಿ ಭಜನೆ ಮತ್ತು ವಿಷ್ಣು ಸಹಸ್ರನಾಮ ನಡೆಯುವುದು. 

Leave a Reply

Your email address will not be published.