ದುಗ್ಗಮ್ಮನ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿ ಮಹೋತ್ಸವ

ದುಗ್ಗಮ್ಮನ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿ ಮಹೋತ್ಸವ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಇಂದಿನಿಂದ ಇದೇ ದಿನಾಂಕ 27ರವರೆಗೆ ನವರಾತ್ರಿ ಮಹೋತ್ಸವವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಟ್ರಸ್ಟಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.

ಇಂದು ಮುಂಜಾನೆ 6.30ಕ್ಕೆ ದೀಪಾರಾಧನೆ ಜರುಗಲಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವಿಘ್ನೇಶ್ವರ ಘಟ ಸ್ಥಾಪನೆ, ನವರಾತ್ರಿ, ನವದುರ್ಗ, ನವಗ್ರಹ, ದ್ವಾರ ಪಾಲ, ಕಾಲ ಭೈರವ ಪೂಜೆಗಳು, ಪ್ರತಿದಿನ ಶ್ರೀ ದುರ್ಗಾಂಬಿಕಾ ದೇವಿಗೆ ಸರಳ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಇಂದು ಶ್ರೀ ದೇವಿಗೆ ಮೋಹಿನಿ ಅಲಂಕಾರ, ನಾಳೆ ಭಾನುವಾರ ಗರುಡ ವಾಹನ ಅಲಂಕಾರ ಮಾಡಲಾಗುತ್ತದೆ.

Leave a Reply

Your email address will not be published.