ಚಾನೆಲ್‌ನಲ್ಲಿ ತಾಯಿ, ಇಬ್ಬರು ಮಕ್ಕಳ ಶವಗಳ ಪತ್ತೆ

ದಾವಣಗೆರೆ, ಅ.12- ಚಾನೆಲ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಇಂದು ಪತ್ತೆಯಾಗಿದ್ದು, ತನ್ನಿಬ್ಬರು ಮಕ್ಕಳೊಂದಿಗೆ ಚಾನಲ್ ಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. 

ಇಲ್ಲಿನ ಜಯನಗರದ ಶ್ರೀದೇವಿ (38) ಹಾಗೂ ಅವರ ಮಕ್ಕಳಾದ ಹಂಸಿಕಾ (12), ನೂತನ್ ಶ್ರೇಣಿಕ್ (9) ಮೃತರು.

ಪ್ರೌಢಶಾಲಾ ಶಿಕ್ಷಕಿಯಾಗಿರುವ ಶ್ರೀದೇವಿ ಅವರು ದ್ವಿಚಕ್ರ ವಾಹನದಲ್ಲಿ ಇಬ್ಬರು ಮಕ್ಕಳ ಸಮೇತ ನಗರದ ಹೊರವಲಯದ ಹೆಚ್. ಕಲ್ಪನಹಳ್ಳಿ ಬಳಿ ತುಂಗಭದ್ರಾ ಚಾನಲ್ ಗೆ ಬಂದು ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಚಾನಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಚಾನಲ್ ನಿಂದ ತಾಯಿ ಮತ್ತು ಮಕ್ಕಳ ಶವಗಳನ್ನು ಹೊರಗೆ ತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Leave a Reply

Your email address will not be published.