ಲೋಕ ಕಲ್ಯಾಣಾರ್ಥ ದೇವರಗುಡ್ಡದಲ್ಲಿ ಗೊರವಯ್ಯನವರಿಗೆ ದೋಣಿ ಪೂಜೆ

ಲೋಕ ಕಲ್ಯಾಣಾರ್ಥ ದೇವರಗುಡ್ಡದಲ್ಲಿ ಗೊರವಯ್ಯನವರಿಗೆ ದೋಣಿ ಪೂಜೆ

ರಾಣೇಬೆನ್ನೂರು, ಅ.10- ಲೋಕ ಕಲ್ಯಾಣಾರ್ಥ ಹಾಗೂ ಅಧಿಕ ಮಾಸದ ಪ್ರಯುಕ್ತ ದೇವರಗುಡ್ಡದ ಶ್ರೀ ಮಾಲತೇಶ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಸಂತೋಷ ಭಟ್ಟ ಪೂಜಾರ ನೇತೃತ್ವದಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜೆ ಮತ್ತು 101 ಗೊರವಯ್ಯನವರ ದೋಣಿಗೆ ಪೂಜೆ, ಕಂಬಳಿಯನ್ನು ವಿತರಿಸಲಾಯಿತು.

ಈ ಸಮಯದಲ್ಲಿ ಸಂತೋಷ ಭಟ್ಟ ಪೂಜಾರ ಮಾತನಾಡಿದರು.  ಭಂಡಾರದ ಗುರುಗಳಾದ ಮಲ್ಲಪ್ಪಯ್ಯ ಒಡೆಯರ್, ಉದಯಕುಮಾರ ವರಗಿರಿ, ನಿಂಗಪ್ಪ ಮುದ್ದಿ, ಹನುಮಂತಪ್ಪ ನಾಯರ್, ದೇವಪ್ಪ ವಾಸರದ, ಪಕ್ಕೀರಪ್ಪ ಐಗಳ, ರಾಜು ಮಾಲಾದಾರ, ನಿಂಗಣ್ಣ ದ್ಯಾಮಣ್ಣನವರ, ಪ್ರಕಾಶ ಬಳ್ಳಾರಿ, ಹನುಮಂತಪ್ಪ ನಾಯರ್ಮ, ಚಿಕ್ಕಪ್ಪ ಚೂರಿ, ಶಂಭಪ್ಪ ಏಳುಕೂರಿ, ಮಾಲತೇಶ ಬಸಮ್ಮನವರು, ನಿಂಗಪ್ಪ ಚಳಗೇರಿ, ಮೈಲಾರಪ್ಪ ಬುಡಪನಹಳ್ಳಿ, ಗುಡ್ಡಪ್ಪ ಸತಗಿ ಸೇರಿದಂತೆ ಮತ್ತಿತರು ಇದ್ದರು.

Leave a Reply

Your email address will not be published.