ವಾಲ್ಮೀಕಿ ಸಮಾಜ, ಎಡ ಪಂಥೀಯ, ಕನ್ನಡ ಪರ ಸಂಘಟನೆಗಳ ಹೋರಾಟದ ಧ್ವನಿ

ವಾಲ್ಮೀಕಿ ಸಮಾಜ, ಎಡ ಪಂಥೀಯ,  ಕನ್ನಡ ಪರ ಸಂಘಟನೆಗಳ ಹೋರಾಟದ ಧ್ವನಿ

ದಾವಣಗೆರೆ, ಅ.10- ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ನಗರದಲ್ಲಿ ಪ್ರತಿ ದಿನ ಹೋರಾಟದ ಧ್ವನಿ ಕೇಳಿ ಬರುತ್ತಿದ್ದು, ಇಂದೂ ಸಹ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ, ಎಡ ಪಂಥೀಯ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಒಂದೇ ಕಡೆ ಒಗ್ಗೂಡಿ ಸಂತ್ರಸ್ತೆಗೆ ನ್ಯಾಯಕ್ಕಾಗಿ ಆಗ್ರಹಿಸಿದವು.

ಮಾನವ ಸೌಹಾರ್ದ ಒಕ್ಕೂಟದ ನೇತೃತ್ವದಲ್ಲಿ ವಾಲ್ಮೀಕಿ ನಾಯಕ ಸಮಾಜ, ಜಿಲ್ಲಾ ಭೋವಿ ಸಮಾಜದ ಮುಖಂಡರು, ಸಮಾಜ ಬಂಧುಗಳು, ಎಸ್ಸಿ-ಎಸ್ಟಿ, ಹಿಂ ದುಳಿದ, ಅಲ್ಪಸಂಖ್ಯಾತ, ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ, ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಪದಾಧಿಕಾರಿಗಳು ಸಂಯುಕ್ತವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ರಾಲಿ ನಡೆಸಿದರು. 

ನಾವು ಭಾರತೀಯ ಸಂಘಟನೆ ಪದಾಧಿಕಾರಿಗಳು ಅಂಬೇಡ್ಕರ್ ವೃತ್ತದಿಂದ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಕಾರ್ಯಕರ್ತೆಯರು ಜಯದೇವ ವೃತ್ತದಿಂದ ಮೆರವಣಿಗೆ ನಡೆಸಿದರು.

ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ವೀರಣ್ಣ, ಸಮಾಜದ ಹಿರಿಯ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ, ಮಾನವ ಸೌಹಾರ್ದ ಒಕ್ಕೂಟದ ಡಾ. ವೈ. ರಾಮಪ್ಪ, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲೇಶಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಹೆಚ್. ಓಬಳಪ್ಪ, ಕೆ.ಎಸ್. ಬಸವಂತಪ್ಪ, ನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಕೆ. ಚಮನ್ ಸಾಬ್, ಡಿ. ಬಸವರಾಜ್, ಅಬ್ದುಲ್ ಲತೀಫ್, ಎನ್. ಎಂ. ಆಂಜನೇಯ ಗುರೂಜಿ, ಶ್ರೀನಿವಾಸ ದಾಸಕರಿಯಪ್ಪ, ವಿನಾಯಕ ಪೈಲ್ವಾನ್, ರಾಘು ದೊಡ್ಡಮನಿ, ಶಾಮನೂರು ಪ್ರವೀಣ್, ಕರೂರು ಹನುಮಂತಪ್ಪ, ಕೆಟಿಜೆ ನಗರ ಲಕ್ಷ್ಮಣ, ಶ್ಯಾಗಲೆ ಮಂಜುನಾಥ, ಕಂದಗಲ್ ಮಂಜುನಾಥ, ಹೊನ್ನಪ್ಪ, ಬಂಬೂಬಜಾರ್ ಹಾಲೇಶ್,   ಆರನೇಕಲ್ ವಿರೂಪಾಕ್ಷ, ಹದಡಿ ಕುಮಾರ್, ರವಿ, ರಾಜಣ್ಣ, ಆವರಗೆರೆ ಗೋಶಾಲೆ ಬಸವರಾಜ, ಪ್ರವೀಣ್ ಬಿಜಿಲಿ, ಅಂಜು ರಾಮನಗರ, ಶ್ಯಾಗಲೆ ಸತೀಶ್, ಅಣಜಿ ಅಂಜಿನಪ್ಪ, ನಾವು ಭಾರತೀಯ ಸಂಘಟನೆಯ ಸಂಚಾಲಕರಾದ ಟಿ. ಜಬೀನಾ ತಾಜ್, ಜಬೀನಾ ಖಾನಂ, ಶಬಾನಾ ಬಾನು, ಸಿಐಟಿಯು ಆನಂದರಾಜು, ಇ. ಶ್ರೀನಿವಾಸ್, ಟಿ. ಅಸ್ಗರ್, ಎಂ. ಕರಿಬಸಪ್ಪ, ಎಂ.ಪಿ. ವೀಣಾ, ಅಮಾನವುಲ್ಲಾ ಖಾನ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಅಂಬಿಕಾ, ದಾಕ್ಷಾಯಣಮ್ಮ, ಶೃತಿ, ಉಮಾ, ಕುಸುಮ ಮಲೇಬೆನ್ನೂರು, ಇಂದ್ರಮ್ಮ, ನಾಗಮ್ಮ, ರತ್ನಮ್ಮ, ಕೌಸರ್‍ಬಾನು, ಗುಲಾಬ್‍ಜಾನ್, ತಲ್‍ಖಾಸ್ ಬಾನು, ಶಿರೀನ್‍ತಾಜ್, ಸಿರಾಜ್‍ ಉನ್ನೀಸಾ ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published.