ಮಹಿಳೆಯರು ಸ್ವಾವಲಂಬಿಯಾಗಲು ಜಿ.ಪಂ. ಸದಸ್ಯೆ ಹೇಮಾವತಿ ಕರೆ

ಮಲೇಬೆನ್ನೂರು,ಅ.10- ಸರ್ಕಾರದ ನೂರಾರು ಯೋಜನೆಗಳು ಜಾರಿಯಲ್ಲಿದ್ದು ಮಹಿಳೆಯರು ಸದುಪ ಯೋಗ ಪಡಿಸಿಕೊಳ್ಳಲು ಹೊಳೆಸಿರಿಗೆರೆ ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಹೇಮಾವತಿ ಭೀಮಪ್ಪ ಕರೆ ನೀಡಿದರು.

ಕೊಕ್ಕನೂರು ಗ್ರಾಮದ ಮಂಜುನಾಥ ಸ್ವಾಮಿ ನಗರ ಮತ್ತು ಗ್ರಾಮೀಣ ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆ ಏರ್ಪಡಿಸಿದ್ದ ಹೊಲಿಗೆ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಮಹಿಳೆಯರು ಜೀವನ ನಡೆಸಲಿಕ್ಕೆ ಬ್ಯೂಟೀಷಿಯನ್, ಮೆಹಂದಿ, ಊದುಬತ್ತಿ, ಕರ್ಪೂರ, ಗೊಂಬೆ ತಯಾರಿಕೆ, ಕಸೂತಿ, ಎಂಬ್ರಾಯಿಡರಿ, ಮೇಣದಬತ್ತಿ ತರಬೇತಿಗಳು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಲಭ್ಯವಿದ್ದು ಉಪಯೋಗಿಸಿ ಕೊಳ್ಳಬೇಕೆಂದು ತಿಳಿಸಿದರು.

ರಾಜಕೀಯ ಕ್ಷೇತ್ರಕ್ಕೆ ಬರುವ ಪೂರ್ವದಲ್ಲಿ ಹೊಲಿಗೆ ತರಬೇತಿ ಪಡೆದು ನಮ್ಮ ಬಟ್ಟೆಗಳನ್ನು ನಾನೇ ಹೊಲಿದು ಕೊಳ್ಳುತ್ತಿದ್ದೆ. ಹಾಗೆಯೇ ಟೈಲರಿಂಗ್ ಕಲಿತ ಮಹಿಳೆ ಮಕ್ಕಳ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ಖರೀದಿಸಲು, ಸಾಂಸಾರಿಕ ಜೀವನದ ಚಿಕ್ಕಪುಟ್ಟ ಖರ್ಚುಗಳಿಗೆ ನೆರವಾಗುತ್ತದೆ ಎಂದರು.

ತಾ.ಪಂ. ಸದಸ್ಯ ಬಸವನಗೌಡ ಮಾತನಾಡಿ, ಮಹಿಳೆ ಅಕ್ಷರ ಕಲಿತರೆ ಶಾಲೆಯೊಂದು ತೆರೆದಂತೆ. ಗ್ರಾಮ ಪಂಚಾಯಿತಿ ನೆನಪಿಸದೆ ಮನೆ ಸುತ್ತ ಸ್ವಚ್ಛವಾಗಿಟ್ಟುಕೊಂಡು ಆರೋಗ್ಯವಂತರಾಗಿರ ಬೇಕೆಂದು ಕಿವಿಮಾತು ಹೇಳಿದರು. 

ಪತ್ರಕರ್ತ ಎಂ.ಕೆ. ರಾಮಶೆಟ್ಟಿ ಮಾತನಾಡಿ, ಟೈಲರಿಂಗ್ ತರಬೇತಿ ಪಡೆದ ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಯಂ ದುಡಿಮೆಗೆ ದಾರಿಯಾಗುತ್ತದೆ. ಆದಾಯದ ಖರ್ಚಿನಲ್ಲಿ ಉಳಿದ ಹಣವನ್ನು ಬ್ಯಾಂಕಿನಲ್ಲಿ ತೊಡಗಿಸಬೇಕು ಎಂದು ಹಿತ ನುಡಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪಾರ್ವತಮ್ಮ ಮಾತನಾಡಿ, ಮಹಿಳೆಯರಿಗೆ ಸ್ವಯಂ ಉದ್ಯೋಗವು ಬಡವರ ಬಂಧು ಆಗಿದೆ. ಗೃಹ ಕಾರ್ಯದ ಜೊತೆಗೆ ಟೈಲ ರಿಂಗ್‍ನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗ್ರಾ.ಪಂ. ಮಾಜಿ ಸದಸ್ಯರಾದ ಬಸವರಾಜಪ್ಪ, ಟಿ.ಎಲ್. ನಾಗರಾಜ್, ಜನ ಶಿಕ್ಷಣ ಸಂಸ್ಥಾನದ ಜಗದೀಶ್, ಹೆಚ್.ಎಂ. ತಿಮ್ಮನಗೌಡ, ಆಂಜನೇಯ ಪಟೇಲ್, ಪತ್ರಕರ್ತ ಸದಾನಂದ, ಅರ್ಚಕ ಹನುಮಂತರಾಯ ಮಾತನಾಡಿದರು. 

ಸಂಸ್ಥೆಯ ಮುಖ್ಯಸ್ಥೆ ನಾಗಮ್ಮ ತಿಪ್ಪೇಸ್ವಾಮಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿಗಳಾದ ರೇಖಾ, ಜ್ಯೋತಿ, ನಿವೇದಿತಾ, ರುಚಿತಾ ಅನಿಸಿಕೆ ಹಂಚಿಕೊಂಡರು.

Leave a Reply

Your email address will not be published.