ಮಲೇಬೆನ್ನೂರು : ಫುಟ್‌ಪಾತ್ ತೆರವು ಗೊಳಿಸಿದ ಮುಖ್ಯಾಧಿಕಾರಿ

ಮಲೇಬೆನ್ನೂರು : ಫುಟ್‌ಪಾತ್  ತೆರವು ಗೊಳಿಸಿದ ಮುಖ್ಯಾಧಿಕಾರಿ

ಮಲೇಬೆ ನ್ನೂರು, ಅ.7- ಇಲ್ಲಿನ ನಂದಿಗುಡಿ ರಸ್ತೆಯ ಚರಂಡಿ ಮೇಲೆ ಇ ಡಲಾಗಿದ್ದ ಶೆಡ್‌ಗಳನ್ನು ತೆರವುಗೊಳಿಸಿ, ಪುರಸಭೆ ವತಿಯಿಂದ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಅವರು ಸಾರ್ವಜನಿ ಕರ ದೂರಿನ ಮೇರೆಗೆ ಬುಧವಾರ ಬೆಳಿಗ್ಗೆ ಜೆಿಸಿಬಿ ಹಾಗೂ ಪುರಸಭೆಯ ಪೌರ ಕಾರ್ಮಿಕರೊಂದಿಗೆ ಕಾರ್ಯಾಚರಣೆ ನಡೆಸಿ, ಫುಟ್‌ಪಾತ್ ತೆರವುಗೊಳಿಸಿದರು. ಕಳೆದ ಹಲವಾರು ವರ್ಷಗಳಿಂದ ಸ್ವಚ್ಛಗೊಳ್ಳದ ಚರಂಡಿಯನ್ನು ಸ್ವಚ್ಛಗೊಳಿಸಿದ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಕಾಳಜಿ ವ್ಯಕ್ತಪಡಿಸಿದ್ದಾರೆ. ಪುರಸಭೆ ಸದಸ್ಯ ಬಿ.ಸುರೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.

Leave a Reply

Your email address will not be published.