ಕಸ ವಿಲೇವಾರಿ : ಗ್ರಾ.ಪಂ. ಅಧ್ಯಕ್ಷರಿಂದ ವಾಹನ ಚಾಲನೆ

ಕಸ ವಿಲೇವಾರಿ : ಗ್ರಾ.ಪಂ.  ಅಧ್ಯಕ್ಷರಿಂದ ವಾಹನ ಚಾಲನೆ

ದಾವಣಗೆರೆ, ಅ.7- ಇಲ್ಲಿಗೆ ಸಮೀಪದ ಎಲೆಬೇತೂರಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ವಾರಕ್ಕೆ ಎರಡು ಬಾರಿ ಕಸ ವಿಲೇ ಮಾಡುತ್ತಿರುವುದು ಸ್ವಾಗತಾರ್ಹ. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಅವರು ಪ್ರತಿ ಓಣಿಗಳಿಗೆ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗಿ, ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ, ಟ್ರ್ಯಾಕ್ಟರ್‌ಗೆ ತಂದು ಹಾಕಿ ಎಂದು ಸ್ವತಃ ಅವರು ಸ್ವಚ್ಛತೆಗೆ ಗ್ರಾಮಸ್ಥರು ಹಾಗೂ ಗೃಹಿಣಿಯರಿಗೆ ಜಾಗೃತಿ ಮೂಡಿಸುವುದರೊಂದಿಗೆ ಕಸವನ್ನು ವಿಲೇವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ರೀತಿ ಎಲ್ಲರೂ ಮಾಡಿದರೆ, ಮಹಾತ್ಮ ಗಾಂಧೀಜಿಯವರ ಸ್ವಚ್ಛತೆಯ ಕನಸು ನನಸಾಗುವುದು ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.

Leave a Reply

Your email address will not be published.