1111 ಬಿಡುಗಡೆ, 225 ದೃಢ

ದಾವಣಗೆರೆ, ಅ.2- ಜಿಲ್ಲೆಯಲ್ಲಿ ಶುಕ್ರವಾರ 225 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದ್ದು, 1111 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಹೊನ್ನಾಳಿ ತಾಲ್ಲೂಕು ಕುಂಬಳೂರು ಗ್ರಾಮದ 77 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 92, ಹರಿಹರ 54, ಜಗಳೂರು 11, ಚನ್ನಗಿರಿ 29, ಹೊನ್ನಾಳಿ 36 ಹಾಗೂ ಹೊರ ಜಿಲ್ಲೆಯ 3 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.  ಇಲ್ಲಿಯವರೆಗೆ ಜಿಲ್ಲೆಯಲ್ಲಿ 16466 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 14564 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 1660 ಸಕ್ರಿಯ ಪ್ರಕರಣಗಳಿವೆ.

Leave a Reply

Your email address will not be published.