ಖರೀದಿ ಕೇಂದ್ರ : ಕಪ್ಪು ಪಟ್ಟಿ ಧರಿಸಿ ರೈತರ ಮೌನ ಪ್ರತಿಭಟನೆ

ಖರೀದಿ ಕೇಂದ್ರ : ಕಪ್ಪು ಪಟ್ಟಿ ಧರಿಸಿ ರೈತರ ಮೌನ ಪ್ರತಿಭಟನೆ

ದಾವಣಗೆರೆ, ಅ.2- ಮೆಕ್ಕೆಜೋಳ, ಭತ್ತ ಮತ್ತು ಅಡಿಕೆ ಖರೀದಿ ಕೇಂದ್ರ ತೆರೆಯದಿರುವುದನ್ನು ಖಂಡಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ. ಎಂ.ಡಿ. ನಂಜುಂಡಸ್ವಾಮಿ ಬಣ)ಯ ವತಿಯಿಂದ ನಗರದಲ್ಲಿ ಇಂದು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರು, ಖರೀದಿ ಕೇಂದ್ರ ತೆರೆಯದ ಸರ್ಕಾರದ ಕ್ರಮ ಖಂಡಿಸಿದರಲ್ಲದೇ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಗಿರೀಶ್, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದಾಗಿ ಹೇಳಿದರು.

ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಖರೀದಿ ಕೇಂದ್ರ ತೆರೆಯುವ ಸಂಬಂಧ  ಜಿಲ್ಲಾಧಿಕಾರಿಗಳವರಿಗೆ ಮನವಿ ಸಲ್ಲಿಸಿ ಸೆ.30ರ ಗಡುವು ನೀಡಲಾಗಿತ್ತು. ಆದರೆ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ದಿನಾಂಕ 7ರಂದು ಮಾಯಕೊಂಡ ಹೋಬಳಿಯಲ್ಲಿ ಅನಿರ್ದಿಷ್ಟ ಚಳುವಳಿ ನಡೆಸಲಿದ್ದು, ಪ್ರತಿ ಗ್ರಾಮ ಪಂಚಾಯ್ತಿಗಳ ಮುಂದೆ ಸಾಂಕೇತಿಕ ಚಳುವಳಿ ನಡೆಸಲಾಗುವುದು.  

ಪ್ರತಿಭಟನೆಯಲ್ಲಿ ಲಿಂಗರಾಜ ಪಾಮೇನಹಳ್ಳಿ, ಕಬ್ಬಳ ಪ್ರಸಾದ್, ಬಲ್ಲೂರು ಪರಶುರಾಮರೆಡ್ಡಿ, ಆವರಗೆರೆ ಇಟಗಿ ಬಸವರಾಜಪ್ಪ, ಆರ್.ಜಿ.ಬಸವರಾಜ ರಾಂಪುರ, ಮಾಯಕೊಂಡದ ಸಿ.ಟಿ. ನಿಂಗಪ್ಪಗೌಡ್ರ ಅಶೋಕ, ಆಲೂರು ಪರಮೇಶ್ವರಪ್ಪ, ಎನ್.ಟಿ. ಜಯನಾಯ್ಕ ನಾಗರಕಟ್ಟೆ, ಆಲೂರು ಮಂಜಪ್ಪ, ಬಲ್ಲೂರು ಅಣ್ಣಪ್ಪ, ಅಣಬೇರು ಕುಮಾರಸ್ವಾಮಿ, ಆವರಗೆರೆ ಕಲ್ಲಪ್ಪ, ಬೂದಾಳ್ ಮಹೇಶ್, ಐ.ಆರ್. ಕರುಣಾ ಇತರರು ಭಾಗವಹಿಸಿದ್ದರು.

Leave a Reply

Your email address will not be published.