ಕಾಯಕದ ಜೊತೆ ಆರೋಗ್ಯ ಕಾಪಾಡಿಕೊಳ್ಳಿ

ಕಾಯಕದ ಜೊತೆ ಆರೋಗ್ಯ ಕಾಪಾಡಿಕೊಳ್ಳಿ

ಕೂಡ್ಲಿಗಿಯಲ್ಲಿ ಪೌರ ಕಾರ್ಮಿಕರಿಗೆ ಗೀತಾ ಕಿವಿ ಮಾತು

ಕೂಡ್ಲಿಗಿ, ಸೆ.26- ಪೌರ ಕಾರ್ಮಿಕರು ತಮ್ಮ ನಿತ್ಯ ಕಾಯಕವಾದ  ಪಟ್ಟಣದ ಸ್ವಚ್ಛತೆ ಕಾಪಾಡುವ ಜೊತೆಗೆ, ನಿಮ್ಮಗಳ ಆರೋಗ್ಯ ಸಹ ಕಾಪಾಡಿಕೊಳ್ಳುವಂತೆ ಪಟ್ಟಣ ಪಂಚಾಯಿತಿಯ ಕಿರಿಯ ಆರೋಗ್ಯ ಸಹಾಯಕರಾದ ಗೀತಾ ಪೌರ ಕಾರ್ಮಿಕರಿಗೆ ಕಿವಿ ಮಾತು ಹೇಳಿದರು.                                                            

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಮೊನ್ನೆ ಪೌರ ಕಾರ್ಮಿಕ ದಿನಾಚರಣೆ ನಿಮಿತ್ತ ಎಲ್ಲಾ ಪೌರ ಕಾರ್ಮಿಕರಿಗೆ ಶುಭಾಶಯ ಕೋರಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಪೌರ ಕಾರ್ಮಿಕರ ವಾರಿಯರ್ಸ್ ಸೇವೆ ಮರೆಯಲಾಗದ ಸೇವೆಯಾಗಿದೆ ಎಂದರು.                                                      

ಪೌರ ಕಾರ್ಮಿಕ ಪರಶುರಾಮ ಮಾತನಾಡಿ, ಪಟ್ಟಣದ ಸ್ವಚ್ಛತೆ ಕಾಪಾಡುವ ಜೊತೆಗೆ ನೂರಾರು ಜನರ ಆರೋಗ್ಯ ಕಾಪಾಡಿದ ಹೆಮ್ಮೆ ಪೌರ ಕಾರ್ಮಿಕರದ್ದಾಗಿದ್ದು, ಉತ್ತಮ ಸೇವೆ ಸಂತಸ ತಂದಿದೆ ಎಂದರು.                             

ಪೌರ ಕಾರ್ಮಿಕರ ಸಂಘದ ಇಬ್ರಾಹಿಂ ಹಾಗೂ ಇತರರು ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ಮಾತನಾಡಿದರು.  

Leave a Reply

Your email address will not be published.