`ಡ್ರಗ್ಗು ಬಿಡೋ ಗುಗ್ಗು’

`ಡ್ರಗ್ಗು ಬಿಡೋ ಗುಗ್ಗು’

ಅಫೀಮು, ಗಾಂಜಾ, ಬ್ರೌನ್ ಶುಗರ್, ಡ್ರಗ್ಗು
ಬೀರೂ, ಬ್ರಾಂಡೀ, ವಿಸ್ಕೀ, ಪೆಗ್ಗು
ಬದುಕಿಗೆ ನೆಮ್ಮದಿ ಕೊಡಲ್ಲೊ ಗುಗ್ಗು
ಕಮರಿ ಹೋಗುವುದು ಜೀವನ ಮೊಗ್ಗು,
ಕಡಿಮೆಯಾಗಲಿಕೆ ನೋವು ಟೆನ್‌ಷನ್ನು
ಸುಲಭೋಪಾಯವು ಮೆಡಿಟೇಷನ್ನು
ದೇಹಾರೋಗ್ಯಕ್ಕೆ ಅಷ್ಟಾಂಗ ಯೋಗ
ಮನಸಿಗೆ ಶಾಂತಿಯು ಸಂಗೀತ ರಾಗ.
ಸಾತ್ವಿಕ ಆಹಾರ ಸೇವಿಸಬೇಕು
ನಾಲಿಗೆ ರುಚಿಗೆ ಆದ್ಯತೆ ಸಾಕು
ಸಿಗರೇಟು, ಗುಟ್ಕಾ, ಬೀಡಿ, ತಂಬಾಕು
ದುಶ್ಚಟಗಳಿಗೆ ಹಾಕಿರಿ ಬ್ರೇಕು.


ಹೆಚ್.ಬಿ.ಮಂಜುನಾಥ
ಹಿರಿಯ ಪತ್ರಕರ್ತ