ಹೊನ್ನಾಳಿ : ಅಂದು ತಾಡಪಾಲಿಗೆ ನೂಕುನುಗ್ಗಲು ಇಂದು ಸೀಲ್‌ಡೌನ್ !

ಹೊನ್ನಾಳಿ : ಅಂದು ತಾಡಪಾಲಿಗೆ  ನೂಕುನುಗ್ಗಲು ಇಂದು ಸೀಲ್‌ಡೌನ್ !

ಹೊನ್ನಾಳಿ, ಸೆ.18- ತಾಲ್ಲೂಕು ಕೃಷಿ ಇಲಾಖೆ ಪಕ್ಕದ ರೈತ ಸಂಪರ್ಕ ಕೇಂದ್ರದಲ್ಲಿ ಕೊರೊನಾ ನಿಯಮ ಪಾಲಿಸದೆ ರೈತರು ತಾ ಮುಂದು, ನಾ ಮುಂದು ಎಂದು ನೂಕು ನುಗ್ಗಲಿನಲ್ಲಿ ತಾಡಪಾಲುಗಳನ್ನು ಕಳೆದೆರಡು ದಿನಗಳಿಂದ ಪಡೆಯುತ್ತಿದ್ದು, ಇಂದು ಆ ಪ್ರದೇಶ ಸೀಲ್‌ಡೌನ್ ಆದ ಘಟನೆ ನಡೆದಿದೆ.

ಪಕ್ಕದ ಕೃಷಿ ಇಲಾಖೆಯಲ್ಲಿನ ನೌಕರನೊಬ್ಬನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.   ತಾಡಪಾಲು ವಿತರಣೆ ವೇಳೆ ಯಾವುದೇ ನಿಯಮ ಪಾಲನೆ ಮಾಡದೆ, ನೂಕುನುಗ್ಗಲಿನಲ್ಲೇ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದು, ಇಲಾಖೆ ಈ ಬಗ್ಗೆ ಗಮನ ಹರಿಸಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದಾಗಿತ್ತು.

Leave a Reply

Your email address will not be published.