ಹರಪನಹಳ್ಳಿ : ಅಲ್ಪ ಸಂಖ್ಯಾತರ ಮೋರ್ಚಾದಿಂದ ಮೋದಿ ಹುಟ್ಟುಹಬ್ಬ

ಹರಪನಹಳ್ಳಿ : ಅಲ್ಪ ಸಂಖ್ಯಾತರ ಮೋರ್ಚಾದಿಂದ ಮೋದಿ ಹುಟ್ಟುಹಬ್ಬ

ಹರಪನಹಳ್ಳಿ, ಸೆ.18- ತಾಲ್ಲೂಕು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ಪಟ್ಟಣದ ಹಿಪ್ಪೆ ತೋಟದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಪುರಸಭೆ ಸದಸ್ಯ ಹಾಗೂ ತಾಲ್ಲೂಕು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಎಂ.ಕೆ.ಜಾವೀದ್ ನೇತೃತ್ವದಲ್ಲಿ  ಶಾಲಾ ಆವರಣ ಸ್ವಚ್ಛಗೊಳಿಸಿ, ಸಸಿ ನೆಟ್ಟು ಮಾತನಾಡಿದ ಅವರು, ಮೋದಿಯವರು ಜನತೆಯ ನಾಯಕ ಜನಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ  ಸಮರ್ಪಿಸಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ. ಮೆಹಬೂಬ್ ಸಾಬ್, ತಾಲ್ಲೂಕು ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿ ಅತೀಕ್ ರೆಹ ಮಾನ್ ಸಾಬ್, ಮುಖಂಡರಾದ ಸಿ. ಸತ್ತರ್ ಸಾಬ್, ಜಿಲಾನ್ ಸಾಬ್, ಚಾಂದ್ ಬಾಷಾ, ಜಾಫರ್ ಸಾಧಿಕ್, ರಾಜೇಸಾಬ್, ಇಮ್ತಿಯಾಜ್, ಅಕ್ರಂ ಬಾಷಾ, ಬಡಗಿ ರಹಮತ್ ವುಲ್ಲಾ, ಹೊಂಬಳಗಟ್ಟಿ ಮೆಹಬೂಬ್ ಸಾಬ್, ಹೆಚ್. ಚಾಂದುಬಾಷಾ, ಹೆಚ್.ಎಸ್. ರಹಮತ್ ವುಲ್ಲಾ, ಅಸ್ಲಂ ಇನ್ನಿತರರಿದ್ದರು.

Leave a Reply

Your email address will not be published.