ಕೂಡ್ಲಿಗಿ : ನ್ಯಾ. ಸದಾಶಿವ ಆಯೋಗದ ವರದಿಯ ಬಹಿರಂಗ ಚರ್ಚೆಗೆ ಒತ್ತಾಯ

ಕೂಡ್ಲಿಗಿ : ನ್ಯಾ. ಸದಾಶಿವ ಆಯೋಗದ ವರದಿಯ ಬಹಿರಂಗ ಚರ್ಚೆಗೆ ಒತ್ತಾಯ

ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತುವಂತೆ ಶಾಸಕರಿಗೆ ಕೂಡ್ಲಿಗಿಯ ಸಂತ ಸೇವಾಲಾಲ್ ಬಂಜಾರ ಅಭಿವೃದ್ಧಿ ಮತ್ತು ಶಿಕ್ಷಣ ಸಂಘದ ಮನವಿ

ಕೂಡ್ಲಿಗಿ, ಸೆ.18- ಪರಿಶಿಷ್ಟ ಜಾತಿಯಲ್ಲಿರುವ ಬಂಜಾರ ಸಮುದಾಯಗಳ ಅಸ್ತಿತ್ವಕ್ಕೆ ಧಕ್ಕೆಯ ನ್ನುಂಟು ಮಾಡುತ್ತಿರುವಂತಹ ಅನಗತ್ಯ ಸನ್ನಿವೇ ಶಗಳು ಸೃಷ್ಟಿಯಾಗುತ್ತಿರುವ ಈ ಸಂದರ್ಭದಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೊದಲು ರಾಜ್ಯದಲ್ಲಿ ಬಹಿರಂಗ ಚರ್ಚೆ ನಡೆಸಿ ವರದಿಯನ್ನು ಕೇಂದ್ರದ ಶಿಫಾರಸ್ಸಿಗೆ ಕಳುಹಿಸುವಂತೆ ಒತ್ತಾಯಿಸಿ  ಕೂಡ್ಲಿಗಿ ಸಂತ ಸೇವಾಲಾಲ್ ಬಂಜಾರ ಅಭಿವೃದ್ಧಿ ಮತ್ತು ಶಿಕ್ಷಣ ಸಂಘವು ಶಾಸಕರಿಗೆ ಮನವಿ ಸಲ್ಲಿಸಿ, ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿಕೊಂಡಿದೆ.

ನಾಡಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಐಕ್ಯತೆ ಉಳಿಸಿಕೊಳ್ಳುವ ಉದ್ದೇಶ ಮತ್ತು ಎಲ್ಲ ರಿಗೂ ಸಮಾನ  ಅವಕಾಶಗಳು ಸಿಗುವಂತಾಗಲು ಸರ್ಕಾರಗಳು ಪಾರದರ್ಶಕ ಕಾರ್ಯಕ್ರಮ ಕೈಗೊಳ್ಳಬೇಕು. ಆದರೆ, ಕೆಲವರು   ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸಮುದಾಯಗಳಲ್ಲಿ ಪರಸ್ಪರ ದ್ವೇಷ ಹುಟ್ಟುಹಾಕಲು ಯತ್ನಿಸುತ್ತಿದ್ದು ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಜಾತಿಗಳನ್ನು ಎಸ್ಸಿ  ಪಟ್ಟಿಯಿಂದ ತೆಗೆದು ಹಾಕಬೇ ಕೆಂಬ ಅನಗತ್ಯ ಚರ್ಚೆಯನ್ನು ಹುಟ್ಟು ಹಾಕುತ್ತಿ ದ್ದಾರೆ. ವರ್ಗೀಕರಣ, ಕೆನೆಪದರ, ಮತ್ತಿತರೆ ವಿಚಾರಗಳನ್ನು ಹರಿಬಿಟ್ಟು ನಮ್ಮ ಐಕ್ಯತೆಯನ್ನು ಛಿದ್ರಗೊಳಿಸಲಾಗುತ್ತಿದೆ. ತಾವುಗಳು ನಮ್ಮ  ಬೇಡಿಕೆಗಳ ಬಗ್ಗೆ  ಸರ್ಕಾರದ ಗಮನ ಸೆಳೆಯಬೇ ಕೆಂದು ಸಂಘಟನೆಯ ಪದಾಧಿಕಾರಿಗಳು ಶಾಸಕರಿಗೆ ಒತ್ತಾಯದ ಮನವಿ ಮಾಡಿದ್ದಾರೆ.

ನ್ಯಾ. ಸದಾಶಿವ ಆಯೋಗದ ವರದಿಯ ಬಹಿರಂಗ ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ/ಗೌಪ್ಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಮತ್ತು ಆಸಕ್ತರಿಗೆ ಈ ವರದಿಯ ದೃಢೀಕೃತ ಪ್ರತಿಯನ್ನು ನೀಡಬೇಕು ಮುಂತಾದ  ಬೇಡಿಕೆ ಗಳಿಗೆ ಒತ್ತಾಯಿಸಿ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣರ ಆಪ್ತ ಸಹಾಯಕ ಶ್ರೀಕಾಂತ್ ಮುಖಾಂತರ ಮನವಿ ಪತ್ರವನ್ನು ಶಾಸಕರಿಗೆ ಕೂಡ್ಲಿಗಿ ತಾಲ್ಲೂಕು ಬಂಜಾರ ಸಂಘ,  ಬಳ್ಳಾರಿ ಜಿಲ್ಲಾ ರಾಷ್ಟ್ರೀಯ ಅಪರಾಧ ತಡೆ ಹಾಗೂ ಮಾನವ ಹಕ್ಕುಗಳ ಭಾರತ್ ಪರಿಷತ್ತು ಇವರುಗಳ ಸಂಯುಕ್ತವಾಗಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲ್ಲೂಕಿನ ಬಂಜಾರ ಸಂಘದ ಅಧ್ಯಕ್ಷ  ಎಸ್.ಆರ್. ಶ್ಯಾಮನಾಯ್ಕ, ಕಾರ್ಯದರ್ಶಿ ಡಿ. ರಾಮನಾಯ್ಕ, ಖಜಾಂಚಿ ವೆಂಕಟೇಶ ನಾಯ್ಕ, ಬಸುನಾಯ್ಕ, ಪ್ರಕಾಶ್‌ ನಾಯ್ಕ, ಎ.ಡಿ. ಗುಡ್ಡ, ಜಿತೇಂದ್ರ ನಾಯ್ಕ, ಅಪ್ಪು ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಸಂಚಾಲಕಿ ಪವಿತ್ರಾಬಾಯಿ ಹಾಗೂ ರಾಷ್ಟ್ರೀಯ ಅಪರಾಧ ತಡೆ ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷ ಕೆ. ಕೃಷ್ಣ ನಾಯ್ಕ ಮತ್ತು ಕಾರ್ಯದರ್ಶಿ ಮಲ್ಲಯ್ಯ ಹಾಗೂ ಲಂಬಾಣಿ, ಭೋವಿ, ಕೊರಚ, ಕೊರಮ ಜನಾಂಗದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published.