ಪ್ರಧಾನಿ ಮೋದಿ ಹುಟ್ಟುಹಬ್ಬ : ಹರಪನಹಳ್ಳಿಯಲ್ಲಿ ಹಣ್ಣು ವಿತರಣೆ

ಪ್ರಧಾನಿ ಮೋದಿ ಹುಟ್ಟುಹಬ್ಬ : ಹರಪನಹಳ್ಳಿಯಲ್ಲಿ ಹಣ್ಣು ವಿತರಣೆ

ಹರಪನಹಳ್ಳಿ, ಸೆ.17- ತಾಲ್ಲೂಕಿನ ಅರಸೀಕೆರೆ ಹೋಬಳಿಯ 7 ಪಂಚಾಯ್ತಿ ಗಳ  ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಇತರೆ ಖಾಸಗಿ ಆಸ್ಪತ್ರೆಗಳಲ್ಲಿನ 70 ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು.

ಜಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮಂಜುನಾಥಯ್ಯ ಮಾತನಾಡಿದರು. ಮಂಡಲ ಉಪಾಧ್ಯಕ್ಷ ಕೆ.ಎಂ. ವಿಶ್ವನಾಥಯ್ಯ, ಕಾರ್ಯದರ್ಶಿ ಕೆ.ಜಿ. ಶಿವಯೋಗಿ, ಜಿಲ್ಲಾ ಎಸ್.ಟಿ. ಮೋರ್ಚಾ ಪದಾಧಿಕಾರಿ ಜಿ. ಕೆಂಚನಗೌಡ, ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಹನುಮಂತ ನಾಯ್ಕ್, ರೈತ ಮೋರ್ಚಾ ಖಜಾಂಚಿ ಮಹಾದೇವಪ್ಪ, ಜಿ.ಪಂ. ಸದಸ್ಯ ಡಿ.ಸಿದ್ದಪ್ಪ, ತಾ.ಪಂ. ಸದಸ್ಯ ಚಂದ್ರ ನಾಯ್ಕ್, ಎಪಿಎಂಸಿ  ನಿರ್ದೇಶಕ ಉಮೇಶ್, ಮುಖಂಡರಾದ ಕೆ.ಆನಂದಪ್ಪ, ಕೆ. ಭರಮಣ್ಣ, ಪಿ.ಶಿವಾನಂದಗೌಡ, ರಾಜನಾಯ್ಕ್, ದಸ್ತಗಿರಿ ಸಾಬ್, ನಿಂಗಪ್ಪ, ಚಂದ್ರಪ್ಪ, ಬಾಬಣ್ಣ, ಜೆ. ಬಸವರಾಜ್, ಬಷೀರ್ ಸಾಬ್, ಇಟಗಳ್ಳಿ ಬಸವರಾಜ್, ವೈದ್ಯಾಧಿಕಾರಿ ಭುವನೇಶ್ವರ್ ನಾಯ್ಕ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published.