ಪ್ರಧಾನಿ ಮೋದಿ ಜನ್ಮದಿನ : ಹರಿಹರದಲ್ಲಿ ವಿಶೇಷ ಪೂಜೆ

ಪ್ರಧಾನಿ ಮೋದಿ ಜನ್ಮದಿನ : ಹರಿಹರದಲ್ಲಿ ವಿಶೇಷ ಪೂಜೆ

ಹರಿಹರ, ಸೆ.17- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಹರಿಹರ ನಗರ ಘಟಕ ಹಾಗೂ ಯುವ ಮೋರ್ಚಾ ವತಿಯಿಂದ ರಾಘವೇಂದ್ರ ಸ್ವಾಮಿ ಮಠ, ಹರಿಹರೇಶ್ವರ ದೇವಸ್ಥಾನ ಹಾಗೂ ಗ್ರಾಮದೇವತೆ ದೇವ ಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಧಾನ ಮಂತ್ರಿ ಯವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾಯಿತು. 

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್,  ದೂಡಾ ಸದಸ್ಯ ರಾಜು ರೋಖಡೆ,  ನಗರಸಭೆ ಸದಸ್ಯ ಎಬಿಎಂ ವಿಜಯ್ ಕುಮಾರ್, ಆಟೋ ಹನುಮಂತಪ್ಪ, ಅಶ್ವಿನಿ ಕೃಷ್ಣ, ನೀತಾ ಮೆಹರ್ವಾಡೆ,  ಯುವ ಮೋರ್ಚಾ ಅಧ್ಯಕ್ಷ ರವಿ ರಾಯ್ಕರ್, ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ, ಅದ್ವೈತ ಶಾಸ್ತ್ರಿ, ಗ್ರಾಮಾಂತರ ಯುವ ಮೋರ್ಚಾದ ಸಿದ್ದೇಶ್ ಕರೂರ್, ಭಾನುವಳ್ಳಿಯ ಬಸವನಗೌಡ, ಎಸ್ಸಿ ಮೋರ್ಚಾದ ಅಧ್ಯಕ್ಷ ಸಂತೋಷ್ ಗುಡಿಮನಿ, ಮುಖಂಡರಾದ ತುಳಜಪ್ಪ ಭೂತೆ, ಎ.ಸಿ. ಆನಂದ್, ವಿನಾಯಕ, ರೂಪಾ ಕಾಟ್ವೆ, ಚೇತನ್ ಕುಮಾರ್, ಆದಿತ್ಯ, ರಾಜಣ್ಣ  ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published.