405 ಪಾಸಿಟಿವ್ 226 ಮಂದಿ ಗುಣಮುಖ, 1 ಸಾವು

ದಾವಣಗೆರೆ, ಸೆ.15 – ಜಿಲ್ಲೆಯಲ್ಲಿ ಇಂದು 405 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 226 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಹಾಗೂ 1 ಸಾವು ಸಂಭವಿಸಿದೆ.

ಈ ದಿನ ದಾವಣಗೆರೆಯಲ್ಲಿ 183, ಹರಿಹರ 72, ಜಗಳೂರು 77,  ಚನ್ನಗಿರಿ 24, ಹೊನ್ನಾಳಿ 45, ಅಂತರ್ ಜಿಲ್ಲೆಯಿಂದ 4 ಸೇರಿದಂತೆ  ಒಟ್ಟು 405 ಪ್ರಕರಣಗಳು ಇಂದು ವರದಿಯಾಗಿವೆ.

ಈ ದಿನ ತಾಲ್ಲೂಕುವಾರು ಬಿಡುಗಡೆಯಾದವರು ದಾವಣಗೆರೆ 110, ಹರಿಹರ 23, ಜಗಳೂರು 30, ಚನ್ನಗಿರಿ 24, ಹೊನ್ನಾಳಿ 31, ಅಂತರ್ ಜಿಲ್ಲೆಯಿಂದ 8 ಒಟ್ಟು 226 ಮಂದಿ ಇಂದು ಬಿಡುಗಡೆಯಾಗಿದ್ದಾರೆ.

ಒಟ್ಟು 13627 ಪ್ರಕರಣಗಳು ದಾಖಲಾಗಿದ್ದು 10648 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಹಾಗೂ 227 ಸಾವು ಸಂಭವಿಸಿದ್ದು ಪ್ರಸ್ತುತ 2752 ಸಕ್ರಿಯ ಪ್ರಕರಣಗಳು ಇವೆ.

Leave a Reply

Your email address will not be published.