34ನೇ ವಾರ್ಡಿನ ಬಡಾವಣೆಯಲ್ಲಿ ಕಸ : ನಗರ ಪಾಲಿಕೆಯಿಂದ ದಂಡ

34ನೇ ವಾರ್ಡಿನ ಬಡಾವಣೆಯಲ್ಲಿ ಕಸ : ನಗರ ಪಾಲಿಕೆಯಿಂದ ದಂಡ

ದಾವಣಗೆರೆ ಸೆ. 15 – ಮಹಾನಗರ ಪಾಲಿಕೆಯ ವ್ಯಾಪ್ತಿಯ 34ನೇ ವಾರ್ಡಿನ ಹದಡಿ ರಸ್ತೆ ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್‍ನ ಕಾಂಪೌಡ್ ಪಕ್ಕದಲ್ಲಿನ ಪ್ರದೇಶದಲ್ಲಿ ಸಾರ್ವಜನಿಕರು ಮನೆಯ ಕಸ ತಂದು ಹಾಕುತ್ತಿರುವ ಬಗ್ಗೆ ರಸ್ತೆಯಲ್ಲಿ ಓಡಾಡುವ ಜನರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಪಾಲಿಕೆಗೆ ಸಾಕಷ್ಟು ಬಾರಿ ದೂರಿರುತ್ತಾರೆ.

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ವಾಹನಗಳಲ್ಲಿ ಕಸ ಹಾಕಲು/ಸುರಿಯಲು ಬಂದ ಓರ್ವ ಸಾರ್ವಜನಿಕರಿಗೆ ಮಹಾನಗರಪಾಲಿಕೆಯ ಸಿಬ್ಬಂದಿಗಳು ರೂ.2000/-ದಂಡ ವಿಧಿಸಿರುತ್ತಾರೆ. ಕಾರಣ ಪ್ರತಿನಿತ್ಯ ಮನೆಯ ಹತ್ತಿರ ಬರುವ ಮನೆ-ಮನೆ ಕಸ ಸಂಗ್ರಹಣೆ ವಾಹನಗಳಿಗೆ ಕಸ ನೀಡಿ ನಗರದ ಸ್ವಚ್ಚತೆಗೆ ಸಹಕರಿಸಬೇಕೆಂದು ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. 

Leave a Reply

Your email address will not be published.