ಹರಪನಹಳ್ಳಿ ಕಾಂಗ್ರೆಸ್‍ನ ಭದ್ರಕೋಟೆ; ಪಕ್ಷ ಸೋಲಲು ಕಾಂಗ್ರೆಸ್ಸಿಗರೇ ಕಾರಣ

ಹರಪನಹಳ್ಳಿ ಕಾಂಗ್ರೆಸ್‍ನ ಭದ್ರಕೋಟೆ; ಪಕ್ಷ ಸೋಲಲು ಕಾಂಗ್ರೆಸ್ಸಿಗರೇ ಕಾರಣ

ಹರಪನಹಳ್ಳಿ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ

ಹರಪನಹಳ್ಳಿ, ಸೆ. 15-  ಹರಪನಹಳ್ಳಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಪಕ್ಷ ಸೋಲಲು ಕಾಂಗ್ರೆಸ್ಸಿಗರೇ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾರಿಗೇ ಪಕ್ಷದ ಟಿಕೆಟ್ ನೀಡಿದರೂ ಅವರ ಪರವಾಗಿ ನಿಂತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಇಲ್ಲಿನ  ಮಿನಿಪಾರ್ಕ್‍ನಲ್ಲಿ  ಹರಪನಹಳ್ಳಿ-ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಗೆ ನಡೆದ §ಆರೋಗ್ಯ ಹಸ್ತ ಯೋಧರ ತರಬೇತಿ¬ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸೋಂಕು ನಿವಾರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ರೈತರ ಹೆಸರಿನಲ್ಲಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿ, ರೈತರಿಗೆ ಬೀಜ ಗೊಬ್ಬರ ನೀಡಲಾಗದೆ ಪರದಾಡುತ್ತಿದ್ದಾರೆ. ಗದ್ದುಗೆ ಏರಿದ ಸರ್ಕಾರ ಬರೀ ಮತ ಕೇಳಲು ಜನರ ಬಳಿಗೆ ಹೋಗುವುದಲ್ಲ. ಗ್ರಾಮೀಣ ಭಾಗದ
ಜನರ ದುಃಖ ದುಮ್ಮಾನಗಳನ್ನು ಆಲಿಸಲು ಈ ಸರ್ಕಾರಕ್ಕೆ ಕಾಳಜಿಯಿಲ್ಲ. ಕಾಂಗ್ರೆಸ್ ಪಕ್ಷ ಕೊರೊನಾ ಅಥವಾ ಯಾವುದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನತೆಗೆ §ಆರೋಗ್ಯ ಹಸ್ತ¬ ದ ಮೂಲಕ ಸಹಾಯ ಹಸ್ತ ನೀಡಲು ಮುಂದಾಗಿದೆ.  ಕಾಂಗ್ರೆಸ್ ಪಕ್ಷವು ಸದಾ ರೈತಪರ ಕಾಳಜಿ ಹೊಂದಿದ್ದು, ಸರ್ವ ಜನಾಂಗದವರಿಗೂ ಸಹಾಯ ಹಸ್ತ ನೀಡುತ್ತಾ ಬಂದಿದೆ. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಮಾತನಾಡಿ, ಬಿಜೆಪಿಯವರು ಚಪ್ಪಾಳೆ, ಗಂಟೆ ಬಾರಿಸುವುದು, ದೀಪ ಬೆಳಗಿಸುವಂತಹ ಅವೈಜ್ಞಾನಿಕ ಕಾರ್ಯಕ್ರಮಗಳಿಂದ ಕೊರೊನಾ ನಿರ್ಮೂಲವಾಗಲಿಲ್ಲ. ಆದರೆ ದಿನದಿಂದ ದಿನಕ್ಕೆ  ಹೆಚ್ಚುತ್ತಿದೆ. ಇನ್ನಾದರೂ ಇಂತಹ ಮೂಢನಂಬಿಕೆ ಬಿಟ್ಟು ರಾಜ್ಯದ ಕೊರೊನಾ ಸೋಂಕನ್ನು ತಡೆಯಲು ಸರ್ಕಾರ ಕ್ರಮವಹಿಸಬೇಕಾಗಿದೆ ಎಂದರು. ಡಾ.ಉಮೇಶಬಾಬು ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‍ ಅಧ್ಯಕ್ಷ ಬೇಲೂರು ಅಂಜಪ್ಪ, ಹರಪನಹಳ್ಳಿ ಬ್ಲಾಕ್‍ ಉಸ್ತುವಾರಿ ವಿಜಯಕುಮಾರ್, ಬಳ್ಳಾರಿ ಜಿಲ್ಲಾ ಗ್ರಾಮಾಂತರ ಟಾಸ್ಕ್ ಫೋರ್ಸ್ ಸಮಿತಿ ಜಿಲ್ಲಾ ಕಾರ್ಯಪಡೆಯ ಸದಸ್ಯ ಶಶಿಧರ್ ಪೂಜಾರ್, ಅರಸೀಕೆರೆ ಬ್ಲಾಕ್ ಟಾಸ್ಕ್‌ ಫೋರ್ಸ್ ಸಮಿತಿ ಅಧ್ಯಕ್ಷ ಕೆ.ಎಂ.ಶಿವಕುಮಾರ ಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ಚಿಗಟೇರಿ ಬ್ಲಾಕ್‍ ಕಾಂಗ್ರೆಸ್ ಉಸ್ತುವಾರಿ ವಾರದ ಗೌಸ್,  ಪುರಸಭೆ ಸದಸ್ಯ  ಜಾಕೀರ್ ಹುಸೇನ್ ಸರ್ಖಾವಸ್, ಲಾಟಿ ದಾದಾಪೀರ್, ಉದ್ದಾರ ಗಣೇಶ, ಎಸ್. ಶೋಭ, ಜೋಗಿನರ ಭರತೇಶ, ಮೊಹಿದ್ದೀನ್, ಜಿ.ಪಂ. ಮಾಜಿ ಸದಸ್ಯ ಎಂ.ಟಿ. ಬಸವನಗೌಡ ಉಪಸ್ಥಿತರಿದ್ದರು.

ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಲ್.ಪೋಮ್ಯನಾಯ್ಕ, ಡಾ. ಉಮೇಶ್ ಬಾಬು ಶಂಕ್ರನ ಹಳ್ಳಿ, ಡಾ. ಅಟವಾಳಿಗಿ ಪ್ರಕಾಶ್, ಅಟವಾಳಿಗಿ ಕೊಟ್ರೇಶ್, ದೊಡ್ಡಜ್ಜರ ಹನುಮಂತಪ್ಪ, ತೊಗರಿಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ. ನೇಮ್ಯಾನಾಯ್ಕ, ಪಿ. ವೇದನಾಯ್ಕ, ವಕೀಲ ಮತ್ತಿಹಳ್ಳಿ ಅಜ್ಜಣ್ಣ, ಮುಖಂಡರಾದ ಜಾವೀದ್, ಎಲ್.ಬಿ. ಹಾಲೇಶನಾಯ್ಕ, ಚಿರಸ್ತಹಳ್ಳಿ ಪಿ. ಮರಿಯಪ್ಪ, ಬಾಣದ ಅಂಜಿನಪ್ಪ, ನೀಲಗುಂದ ಬಿ. ವಾಗೀಶ್, ಅಲಮರಸೀಕೆರೆ ಪರಶುರಾಮ, ಕೆ.ರಿಯಾಜ್, ಮಹಾಂತೇಶ್ ನಾಯ್ಕ್, ಶ್ರೀಕಾಂತ್ ಯಾದವ್, ಅಲಮರಸೀಕೆರೆ ಬಸವರಾಜು ಮತ್ತು ಇತರರು ಉಪಸ್ಥಿತರಿದ್ದರು.

Leave a Reply

Your email address will not be published.