ಹರಪನಹಳ್ಳಿಯಲ್ಲಿ ಗಾಂಜಾ ಪತ್ತೆ

ಹರಪನಹಳ್ಳಿಯಲ್ಲಿ ಗಾಂಜಾ ಪತ್ತೆ

ಹರಪನಹಳ್ಳಿ, ಸೆ.15- ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಪ್ರತ್ಯೇಕವಾಗಿ  ಮಾಲು ಸಮೇತ ಇಬ್ಬರನ್ನು ಇಲ್ಲಿಯ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಬಳಿಯ ಜಮೀನಿನ ಮೇಲೆ ದಾಳಿ ಮಾಡಿದ ಪೊಲೀಸರು ಅಕ್ರಮವಾಗಿ ಬೆಳೆದಿದ್ದ 2 ಲಕ್ಷ ರೂಪಾಯಿ ಮೌಲ್ಯದ 20 ಕಿಲೋ ತೂಕದ 8 ಗಾಂಜಾ ಸೊಪ್ಪಿನ ಗಿಡಗಳನ್ನು ಪತ್ತೆ ಹಚ್ಚಿ, ದಾಸಪ್ಪನರ ಬಸವರಾಜ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಪಟ್ಟಣದ ಹೊಳಲು ರಸ್ತೆಯ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಚೆನ್ನಹಳ್ಳಿ ತಾಂಡಾದ ಲಕ್ಯಾನಾಯ್ಕ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 1500 ಬೆಲೆಯ 215 ಗ್ರಾಂ ಒಣಗಿದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.

ಸಿಪಿಐ ಕುಮಾರ್‌ರವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಪ್ರಕಾಶ್‌  ಹಾಗೂ ಮಹ್ಮದ್ ಇಸಾಕ್ ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ. ಎಎಸ್‌ಐ ಸದ್ಯೋಜಾತಪ್ಪ, ಜಿ.ಕೊಟ್ರೇಶ್‌, ರವಿಕುಮಾರ್‌, ಕೊಟ್ರೇಶ್ ಮತ್ತಿಹಳ್ಳಿ, ಮಂಜುನಾಥ ಬಂಡಿ, ನಾಗರಾಜ ಚಿಂಚಲಿ, ಮನೋಹರ ಪಾಟೀಲ, ವೈ. ಹೊನ್ನಪ್ಪ, ಬಿ. ದೇವೇಂದ್ರಪ್ಪ, ರವಿ ದಾದಾಪುರ, ಗುರುರಾಜ, ಇಮಾಮ್ ಸಾಬ್, ಬಸವರಾಜ, ಕೊಟ್ರೇಶ್ ಅವರು ಎರಡೂ ಕಡೆ ದಾಳಿಯಲ್ಲಿ ಪ್ರತ್ಯೇಕವಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published.