ಡಿಸಿಎಂ ಟೌನ್‌ಶಿಪ್‌ಗೆ ಮೇಯರ್ ಭೇಟಿ

ಡಿಸಿಎಂ ಟೌನ್‌ಶಿಪ್‌ಗೆ ಮೇಯರ್ ಭೇಟಿ

ದಾವಣಗೆರೆ, ಸೆ.15- ಪಾಲಿಕೆ ವ್ಯಾಪ್ತಿಯ 25ನೇ ವಾರ್ಡ್ ಡಿಸಿಎಂ ಟೌನ್‍ಶಿಪ್‍ನ ಮುಖ್ಯ ರಸ್ತೆ ಮತ್ತು ರಾಜಕಾಲುವೆ ಅಗಲೀಕರಣದ ವಿಚಾರವಾಗಿ ಸ್ಥಳಕ್ಕೆ ಇಂದು ಮಹಾಪೌರ ಬಿ.ಜಿ. ಅಜಯ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಮುಖ್ಯ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರ ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ರಾಜ ಕಾಲುವೆ ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು. ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಡಿಸಿಎಂ ಟೌನ್‍ಶಿಪ್ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಸ್ಥಳೀಯರಾದ ಚಂದ್ರಣ್ಣ, ಮಂಜುನಾಥ, ತಿರುಮಲೇಶ್ ಮತ್ತು ಪಾಲಿಕೆಯ ಅಭಿಯಂತರರು, ಅಧಿಕಾರಿಗಳು ಮತ್ತಿತರರಿದ್ದರು.

Leave a Reply

Your email address will not be published.