ಜ್ಞಾನ ಸಾಮರ್ಥ್ಯದಿಂದ ಆತ್ಮನಿರ್ಭರ್ ಸಾಧ್ಯ

ಜ್ಞಾನ ಸಾಮರ್ಥ್ಯದಿಂದ ಆತ್ಮನಿರ್ಭರ್ ಸಾಧ್ಯ

ದಾವಣಗೆರೆ, ಸೆ. 15 – ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನಡೆಸಬಹುದಾದ ಸರಕುಗಳನ್ನು ಭಾರ ತದಲ್ಲಿ ಉತ್ಪಾದಿಸಲು ಸಾಧ್ಯ ಎಂಬುದನ್ನು ಇಸ್ರೋ ಸಾಧನೆ ತೋರಿಸಿದೆ. ನಮ್ಮಲ್ಲಿನ ಸಂಪ ನ್ಮೂಲ ಹಾಗೂ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡರೆ ಆತ್ಮನಿರ್ಭರ್ ಸಾಧ್ಯವಿದೆ ಎಂದು ಐಐಐಟಿ ಧಾರವಾಡದ ರಿಜಿಸ್ಟ್ರಾರ್ ಎಸ್. ಬಸವರಾಜಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಬಿಐಇಟಿ ಕಾಲೇಜಿನಲ್ಲಿ ಇನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ, ಐಎಸ್‌ಟಿಇಗಳ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಇಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಆತ್ಮನಿರ್ಭರತೆ ಹೊಂದುವುದು ಸುಲಭ ವಲ್ಲ. ಇದಕ್ಕಾಗಿ ನಾವು ಮೂಲ ಆಧಾರಗಳನ್ನು ಬಲಪಡಿಸಿಕೊಳ್ಳಬೇಕಿದೆ. ಸ್ಥಳೀಯ ಉತ್ಪನ್ನಗ ಳಿಗೆ ಉತ್ತೇಜನ ನೀಡಬೇಕಿದೆ ಎಂದವರು ಹೇಳಿದರು. ಆತ್ಮನಿರ್ಭರ್ ಭಾರತ ರೂಪಿಸು ವಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದಾ ಗಿದೆ. ಇಂಜಿನಿಯರ್‌ಗಳು ಗುಣಮಟ್ಟದ ಹಾಗೂ ನಂಬಿಕಾರ್ಹ ಉತ್ಪನ್ನಗಳನ್ನು ರೂಪಿಸಿದರೆ ಆತ್ಮನಿರ್ಭರ್ ಭಾರತ ಸಾಧ್ಯವಾಗಲಿದೆ ಎಂದವರು ತಿಳಿಸಿದರು.

ಭಾರತದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣ 67 ಕೋಟಿಯಷ್ಟಿದೆ. ಆದರೂ, ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ಶೇ.26ರಷ್ಟಿದೆ. ಯುರೋಪ್‌ನಲ್ಲಿ ಈ ಪ್ರಮಾಣ ಶೇ.85ರಷ್ಟಿದೆ. ಹೀಗಾಗಿ ಭಾರತದಲ್ಲಿ ಸಾಕಷ್ಟು ಪ್ರತಿಭೆಗಳು ಉನ್ನತ ಕಲಿಕೆಯಿಂದ ವಂಚಿತವಾದರೆ, ಇನ್ನು ಕೆಲ ಪ್ರತಿಭೆಗಳು ದೊಡ್ಡ ಪ್ರಮಾಣದಲ್ಲಿ ವಿದೇಶಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ ಎಂದವರು ವಿಷಾದಿಸಿದರು.

ಇಂದು ಎಲ್ಲವೂ ಆನ್‌ಲೈನ್ ಆಗುತ್ತಿದೆ. ಆಹಾರದಿಂದ ಹಿಡಿದು ಮದುವೆ ಕೆಲಸದವ ರೆಗಿನ ಸೌಲಭ್ಯಗಳು ಆನ್‌ಲೈನ್ ಮೂಲಕ ದೊರೆಯುತ್ತಿವೆ. ಇದರ ಹಿಂದೆ ಐ.ಟಿ. ಇಂಜಿ ನಿಯರ್‌ಗಳ ಪರಿಶ್ರಮವಿದೆ. ಇವರ ಪರಿಶ್ರಮ ಕೊರೊನಾ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಹಲವಾರು ಕಾರ್ಯ ನಿರ್ವಹಣೆಗಳಿಗೆ ನೆರವಾಗಿದೆ ಎಂದವರು ಹೇಳಿದರು.

ಹರಿಹರದ ಪಿ.ಎಸ್.ಕೆ. ಫಾರ್ಮಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎನ್. ಬಸವರಾಜ್ ಮಾತನಾಡಿ, ಪ್ರತಿಯೊಂದು ಉದ್ಯಮವೂ ತನ್ನದೇ ಆದ ವಿಶೇಷತೆ ಹೊಂದಿರಬೇಕು ಹಾಗೂ ತನ್ನ ಗ್ರಾಹಕರನ್ನು ಗೌರವಿಸಬೇಕು. ಅಮೆಜಾನ್ ಮುಖ್ಯಸ್ಥರಾದ ಜೆಫ್ ಬೆಜೋಸ್ ಅವರು ಮಾರಿದ ಸರಕು ಗಳನ್ನು ವಾಪಸ್ ಪಡೆಯುವ ಇಲ್ಲವೇ ಬದಲಿಸಿ ಕೊಡುವ ಪದ್ಧತಿ ಅಳವಡಿಸಿಕೊಂಡರು. ಇದು ಅಮೆಜಾನ್ 2 ಟ್ರಿಲಿಯನ್ ಡಾಲರ್ ಕಂಪನಿಯಾಗಲು ಸಾಧ್ಯವಾಯಿತು ಎಂದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ವಿಶ್ವೇಶ್ವ ರಾಯ ಅವರ ಜನ್ಮದಿನವನ್ನು ಇಂಜಿನಿಯರ್‌ ಗಳ ದಿನವೆಂದು ಆಚರಿಸುತ್ತಿದ್ದೇವೆ. ಅವರು ಸ್ಥಾಪಿಸಿದ ಕೈಗಾರಿಕೆಗಳಿಗೆ ನವೀನ ತಂತ್ರಜ್ಞಾನ ಒದಗಿಸಿ ಬೆಳೆಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಆಗಲಿದೆ ಎಂದರು.

ಕೆ.ಆರ್.ಐ.ಡಿ.ಎಲ್. ನಿವೃತ್ತ ಕಾರ್ಯ ಕಾರಿ ಇಂಜಿನಿಯರ್‌ ಕೆ.ಜಿ. ಬಸವನಗೌಡ, ಯುಬಿಡಿಟಿ ಕಾಲೇಜಿನ ನಿವೃತ್ತ ಉಪನ್ಯಾಸಕ ಹೆಚ್. ಬಸವರಾಜಪ್ಪ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ ವಹಿಸಿದ್ದರು.

ನಾಗರಾಜ್ ಪ್ರಾರ್ಥಿಸಿದರೆ, ಎಂ.ಎಸ್. ನಾಗರಾಜ್ ಸ್ವಾಗತಿಸಿದರು. ಡಾ. ಜಿ.ಪಿ. ದೇಸಾಯಿ ನಿರೂಪಿಸಿದರೆ, ಡಾ. ಬಿ.ಇ. ರಂಗಸ್ವಾಮಿ ವಂದಿಸಿದರು.

Leave a Reply

Your email address will not be published.