ಜಯದೇವ ಜಗದ್ಗುರುಗಳ ರಥೋತ್ಸವ

ಜಯದೇವ ಜಗದ್ಗುರುಗಳ ರಥೋತ್ಸವ

ಚಿತ್ರದುರ್ಗ ಬೃಹನ್ಮಠದ ಹಿರಿಯ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 64ನೇ ವರ್ಷದ ರಥೋತ್ಸವವು ದಾವಣಗೆರೆಯ ಶ್ರೀ ಶಿವಯೋಗಾಶ್ರಮದ ಆವರಣದಲ್ಲಿ ಮಂಗಳವಾರ ಸಂಜೆ ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವ ಮತ್ತು ಶ್ರೀ ಬಸವ ಪ್ರಭು ಸ್ವಾಮೀಜಿ ಸಮ್ಮುಖದಲ್ಲಿ ಸರಳವಾಗಿ ನಡೆಯಿತು.

ದಾವಣಗೆರೆ, ಸೆ.15- ಜಯದೇವ ಜಗದ್ಗುರುಗಳು ಇತಿಹಾಸವನ್ನೇ ನಿರ್ಮಿಸಿದ ರೆಂದು ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಶರಣರು ವ್ಯಾಖ್ಯಾನಿಸಿದರು.

ಶರಣರು ಇಂದು ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಲಿಂ. ಶ್ರೀ ಜಯದೇವ ಜಗದ್ಗುರುಗಳ 64ನೇ ವರ್ಷದ ಸರಳ ರಥೋತ್ಸವ, ವಚನ ಗ್ರಂಥ ಮೆರವಣಿಗೆ ಮತ್ತು ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಜಯದೇವ ಜಗದ್ಗುರುಗಳ ಸಮಾಜಮುಖಿ ಕಾರ್ಯಗಳು ಅವಿಸ್ಮರಣೀಯವಾಗಿವೆ. ಅವರು ಸದಾ ಕ್ರಿಯಾಶೀಲರಾಗಿದ್ದು, ಜೀವನೋತ್ಸಾಹವನ್ನು ಮೈಗೂಡಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಆದರ್ಶ ಸಮಾಜ ನಿರ್ಮಾಣವೇ ಜಯದೇವ ಜಗದ್ಗುರುಗಳ ಗುರಿಯಾಗಿತ್ತು. ಅವರು ಸತ್ತಿಲ್ಲ, ಸಾಯುವುದೂ ಇಲ್ಲ. ಅವರ ಸತ್ಕಾರ್ಯಗಳು ಸ್ಮರಣೆಯ ದೀವಿಗೆಗಳು. ಅವರು ಶಿಕ್ಷಣ ಪ್ರೇಮಿ, ಪಾರಮಾರ್ಥದ ಸೂರ್ಯ ಎಂದು ವರ್ಣಿಸಿದರು.

ಇಂದು ಅನೇಕರು ಏನೂ ಇಲ್ಲದಿದ್ದರೂ ಎಲ್ಲಾ ಇದ್ದವರಂತೆ ವರ್ತಿಸುತ್ತಾರೆ. ಆದರೆ ಜಯದೇವ ಶ್ರೀಗಳು ಎಲ್ಲವನ್ನೂ ಹೊಂದಿದ್ದರೂ ಏನೂ ಇಲ್ಲದವ ರಂತೆ, ಸಾಮಾನ್ಯರಂತೆ ಸರಳ ಜೀವನ ನಡೆಸು ತ್ತಿದ್ದರು. ಅವರು ಸಾಂಸ್ಕೃತಿಕ ನಾಯಕರಾಗಿ ಕಂಗೊಳಿಸುತ್ತಿದ್ದರು ಎಂದು ಹೇಳಿದರು.

ಮಹಾತ್ಮ ಗಾಂಧೀಜಿಯವರ ಜೊತೆ ಜಯದೇವ ಜಗದ್ಗುರುಗಳ ಭೇಟಿಯಾಗಿದ್ದು ಐತಿಹಾಸಿಕ ಘಟನೆಯಾಗಿದೆ. ಮುರುಘಾ ಮಠದಲ್ಲಿ ಮುಂದಿನ ತಿಂಗಳು ಮುರುಘಾ ಶ್ರೀ ಮ್ಯೂಸಿಯಂ ಉದ್ಘಾಟನೆಯಾಗ ಲಿದೆ. ಇದರಲ್ಲಿ ಜಯದೇವ ಜಗದ್ಗುರುಗಳು ಮಲಗು ತ್ತಿದ್ದ ಮಂಚ, ಕೈಯಲ್ಲಿ ಹಿಡಿದ ಬೆತ್ತಗಳು, ಪಾದುಕೆಗಳು ಸೇರಿದಂತೆ ಅಪೂರ್ವ ವಸ್ತುಗಳ ಸಂಗ್ರಹವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳಬ ಹುದಾಗಿದೆ ಎಂದು ಹೇಳಿದರು.

ಜಯದೇವ ಜಗದ್ಗುರುಗಳು ಉಪಯೋ ಗಿಸುತ್ತಿದ್ದ ಮೇನೆಯನ್ನು ಮ್ಯೂಸಿಯಂನಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ಶ್ರೀ ಮಲ್ಲಿಕಾರ್ಜುನ ಜಗದ್ಗುರುಗಳು ಬಳಸುತ್ತಿದ್ದ ವಸ್ತುಗಳು, ಅಪೂರ್ವವಾದ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

ವಿಧಾನಸೌಧದ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ನಿರ್ಮಿಸಬೇ ಕೆಂದು ತಾವು ಇಂದು ಬೆಳಿಗ್ಗೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದ ಶರಣರು, ಸರ್ಕಾರ ತಕ್ಷಣ ಈ ಬಗ್ಗೆ ಕಾರ್ಯೋನ್ಮುಖ ವಾಗಲೆಂದು ಆಗ್ರಹ ಪಡಿಸಿದರು.

ಬಸವ ಕಲಾಲೋಕ ಮತ್ತು ಗಂಜಿಕಟ್ಟಿ ಕೃಷ್ಣಮೂರ್ತಿ ಅವರಿಂದ ಪ್ರಾರ್ಥನೆಯಾಯಿತು. ರಜಾಕ್‌ ಅವರು ಸ್ವಾಗತಿಸಿದರು. ಎಂ.ಕೆ. ಬಕ್ಕಪ್ಪ ಅವರು ನಿರೂಪಿಸಿ, ವಂದಿಸಿದರು.

ವೇದಿಕೆಯಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ, ಡಾ. ಎಸ್‌.ಎಂ. ಎಲಿ ಮತ್ತಿತರರು ಉಪಸ್ಥಿತ ರಿದ್ದರು. ಕಾರ್ಯಕ್ರಮದಲ್ಲಿ ಎಂ. ಜಯಕು ಮಾರ್‌, ಅಂದನೂರು ಮುಪ್ಪಣ್ಣ, ಎಸ್‌. ಓಂಕಾ ರಪ್ಪ, ಟಿ.ಎಂ. ವೀರೇಂದ್ರ ಮತ್ತಿತರರಿದ್ದರು.

Leave a Reply

Your email address will not be published.