ಜಗಳೂರು : ಕನ್ನಡ ಭಾಷೆ ಉಳಿವಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಜಗಳೂರು : ಕನ್ನಡ ಭಾಷೆ ಉಳಿವಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಜಗಳೂರು, ಸೆ.15- ಸಂವಿಧಾನದ ಪರಿಚ್ಛೇದದ ಪ್ರಕಾರ ರಾಷ್ಟ್ರದಲ್ಲಿ 22 ಭಾಷೆಗಳಿಗೂ ಸ್ಥಾನಮಾನ ಕೊಡಬೇಕು. ಕೇವಲ ಒಂದೇ ಭಾಷೆ, ಒಂದೇ ರಾಷ್ಟ್ರ ಭಾಷೆ ಎಂಬುದಾಗಿ  ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವುದು ಖಂಡನೀಯ ಎಂದು ಕರವೇ ಮುಖಂಡರು ಆರೋಪಿಸಿದರು.

ಪಟ್ಟಣದ ಬಿಎಸ್ಎನ್ಎಲ್ ಕಛೇರಿ ಮುಂಭಾಗ ಕರವೇ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಬಹುಭಾಷೆ, ಸಂಸ್ಕೃತಿ, ಧರ್ಮಗಳಿದ್ದು ಬಹುತ್ವ ಉಳಿದರೆ ಮಾತ್ರ ಒಕ್ಕೂಟ ಉಳಿಯಲು ಸಾಧ್ಯ. ಹಿಂದಿ ಭಾಷಿಗರಿಗೆ ಹಿಂದಿ ಭಾಷೆಯಲ್ಲಿ  ಎಲ್ಲಾ ಮಾಹಿತಿ ಲಭ್ಯವಿದೆ. ಆದರೆ ಕನ್ನಡಿಗ, ಮಲೆಯಾಳಿ ಹಾಗು ಇತರೆ ಭಾಷಿಗರು ಬೇರೆ ರಾಜ್ಯದಲ್ಲಿ ನೆಲೆಸಿದರೆ ಅವರಿಗೆ ಯಾವುದೇ ಸೇವೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೂಡಲೇ ಕೇಂದ್ರ ಸರ್ಕಾರ ಎಲ್ಲಾ ಭಾಷೆಗಳಿಗೂ ಮಾನ್ಯತೆ ನೀಡಿ ಸಮಾನ ಅವಕಾಶ ಕಲ್ಪಿಸಬೇಕು. ಹಿಂದಿ ಭಾಷೆಯನ್ನು ಹೇರಿಕೆ ಮಾಡಬಾರದು ಎಂದು ಆಗ್ರಹಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಮಹಾಂತೇಶ್, ಶಿವಾಜಿ, ಲಿಂಗರಾಜ್, ಪದಾಧಿ ಕಾರಿಗಳಾದ ರೇಖಾ ಶಂಭುಲಿಂಗಪ್ಪ, ಶಾಹೀನ ಬೇಗಂ, ರಾಜಪ್ಪ ಎ. ತಿಪ್ಪೇ ಸ್ವಾಮಿ, ಮಲ್ಲಿಕಾರ್ಜುನ್, ವೇದಾವತಿ, ಮಂಜಣ್ಣ, ಹಫೀಜ್ ಇನ್ನಿತರರಿದ್ದರು.

Leave a Reply

Your email address will not be published.