ಕೆ.ಪಿ .ಸಿದ್ದಬಸಪ್ಪರ ಅನನ್ಯ ಸೇವೆಗೆ ಪುರಸ್ಕರಿಸಿದ್ದ ಕಸಾಪ

ಕೆ.ಪಿ .ಸಿದ್ದಬಸಪ್ಪರ ಅನನ್ಯ ಸೇವೆಗೆ ಪುರಸ್ಕರಿಸಿದ್ದ ಕಸಾಪ

ದಾವಣಗೆರೆ,ಸೆ.15-  ಮಲೇಬೆನ್ನೂರಿನ ಹಿರಿಯ ಮುತ್ಸದ್ಧಿ ಕೆ.ಪಿ.ಸಿದ್ದಬಸಪ್ಪ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಅವರುಗಳು ಸಂತಾಪ ವ್ಯಕ್ತಪಡಿ ಸಿದ್ದಾರೆ. ಧಾರ್ಮಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದ ಸಿದ್ದಬಸಪ್ಪ ಅವರ ಸಾಮಾಜಿಕ ಕಾರ್ಯವನ್ನು ಶ್ಲ್ಯಾಘಿಸಿ 2020, ಫೆಬ್ರವರಿಯಲ್ಲಿ ನಗರದ ಕುವೆಂಪು ಕನ್ನಡ ಭನದಲ್ಲಿ ನಡೆದ ದಾವಣಗೆರೆ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಿದ್ದನ್ನು ಅವರು ಸ್ಮರಿಸಿದ್ದಾರೆ.

Leave a Reply

Your email address will not be published.