ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ರೈತರ ಪ್ರತಿಭಟನೆ

ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ರೈತರ ಪ್ರತಿಭಟನೆ

ದಾವಣಗೆರೆ, ಸೆ.14- ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ  ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. 

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಪದಾಧಿಕಾರಿಗಳು, ಸಚಿವ ಪಾಟೀಲ್ ಅವರ ಭಾವಚಿತ್ರವುಳ್ಳ ಫ್ಲೆಕ್ಸ್ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ಸಚಿವರು ವಿಧಾನಸೌಧದಿಂದಲೇ ತೊಲಗಲಿ ಎಂದು ಘೋಷಣೆ ಕೂಗಿದರು. 

ಯೂರಿಯಾ ಗೊಬ್ಬರದ ಅಭಾವ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿದ್ಯಾರ್ಥಿ ಗಳಿಗೆ ಬಿಎಸ್ಸಿ ಅಗ್ರಿ ಪದವಿಯಲ್ಲಿ ಈ ಹಿಂದೆ ಕೃಷಿಕರ ಮಕ್ಕಳಿಗೆ ಇದ್ದ ತಲಾ ಶೇ.40ರ ಕೋಟಾ ತೆಗೆದು ಹಾಕಿದ್ದನ್ನು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದರು. ಇದಕ್ಕೆ ಅವರನ್ನು ಸಚಿವರು ಅವಹೇಳನ ಮಾಡಿದ್ದು ಸರಿಯಲ್ಲ. ನಂಜುಂಡ ಸ್ವಾಮಿ, ಪುಟ್ಟಣ್ಣಯ್ಯ ಮುಂತಾದವರ ಜೊತೆ ಗುರುತಿಸಿಕೊಂಡು ಹೋರಾಟ ನಡೆಸಿ ಯಾವುದೇ ಅಧಿಕಾರದ ಆಸೆ ಇಲ್ಲದ ಕೋಡಿ ಹಳ್ಳಿ ಚಂದ್ರಶೇಖರ್ ಅವರನ್ನು ಅವಹೇಳನ ಮಾಡಿದ್ದು ಸರಿಯಲ್ಲ ಎಂದು ಪ್ರತಿಭಟನಾ ಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಬಿ.ಸಿ. ಪಾಟೀಲ್ ಅವರು ಬೇಷ ರತ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರ ಲ್ಲದೇ, ಕ್ಷಮೆ ಕೇಳದಿದ್ದರೆ ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಲಾ ಗುವುದು ಎಂದು ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಹನುಮೇಶಿ, ಶತಕೋಟಿ ಬಸವರಾಜ್, ಮಲ್ಲಶೆಟ್ಟಿಹಳ್ಳಿ ಮಂಜುನಾಥ್, ಬಸವಾಪಟ್ಟಣ ಬಸವರಾಜ್, ಗುರುಸಿದ್ದಾಪುರ ಸಿದ್ದೇಶ್, ದಾಗಿನಕಟ್ಟೆ ಸಂತೋಷ್‌ಕುಮಾರ್, ಬುಳ್ಳಾಪುರ ಶಿವಣ್ಣ, ಕಲೀಂಸಾಬ್, ಕೃಷ್ಣಮೂರ್ತಿ, ದಾಗಿನಕಟ್ಟೆ ಬಸವರಾಜ್, ನಾಗರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published.