ಸುಪ್ರೀಂ ಸಲಹೆಯಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಿ

ಮಾದಿಗ ಸಮಾಜದ ಮುಖಂಡ ಹೆಚ್. ನಿಜಗುಣ ಒತ್ತಾಯ

ಹರಿಹರ, ಸೆ. 13 – ತಲೆತಲಾಂತರ ಗಳಿಂದ ಅತೀ ಹಿಂದುಳಿದಿರುವ ಅಸ್ಪೃಶ್ಯ ಸಮಾಜಗಳಿಗೆ ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬಹುದು ಎಂದು ಸುಪ್ರೀಂಕೋರ್ಟ್ ಪಂಚಪೀಠ ಸಲಹೆ ಮಾಡಿದೆ. ಅದರಂತೆ ಪರಿಶಿಷ್ಟ ಜಾತಿ ಯಲ್ಲಿ ಅತಿ ಹಿಂದುಳಿದ ಹೊಲೆಯ ಮತ್ತು ಮಾದಿಗ ಜಾತಿಗಳಿಗೆ ಮೀಸಲಾತಿ ನೀಡಿ ಎಂದು ಮಾದಿಗ ಸಮಾಜದ ಮುಖಂಡ ಹಾಗು ದೂಡಾ ಮಾಜಿ ಸದಸ್ಯ ಹೆಚ್.ನಿಜಗುಣ ಸರ್ಕಾರವನ್ನು ಒತ್ತಾಯಿಸಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂ ಗಣದಲ್ಲಿ ಮಾದಿಗ ಸಮಾಜದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಲ್ಲಿರುವ ಇತರೆ ನನ್ನ ಸಹೋದರ ಜಾತಿಯ ಯಾವುದೇ ಮೀಸಲಾತಿಯನ್ನು ನಾವು ಕೇಳುತ್ತಿಲ್ಲ, ನಮ್ಮ ಜನಸಂಖ್ಯೆಗೆ ಅನುಗುಣ ವಾಗಿ ಜಸ್ಟಿಸ್ ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿಯನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಇದರಿಂದ ಬೇರೆ ಯಾವುದೇ ಸಮಾಜಗಳು ಬೇಸರವಾ ಗಬಾರದು ಎಂದು ಮನವಿ ಮಾಡಿದರು.

ಈ ಹಿಂದೆ ಸಮಾಜದ ವತಿಯಿಂದ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮತ್ತು ಇತರೆ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಅಲ್ಲದೆ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಒಳ ಮೀಸಲಾತಿಗೆ ಈ ಹಿಂದೆ ಸಹಮತ ವ್ಯಕ್ತಪಡಿಸಿದ್ದರು, ಆದರೆ ಅವರದೇ ಸರ್ಕಾರಗಳಿ ದ್ದಾಗ ಗಣನೆಗೆ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾದಿಗ ಸಮಾಜದ ಮುಖಂಡ ಹಾಗೂ ನಗರಸಭಾ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ ಮಾತನಾಡಿ, ಕಳೆದ 25 ವರ್ಷಗ ಳಿಂದ ನಮ್ಮ ಸಮಾಜದ ಹೋರಾಟ ಕೇವಲ ಒಂದು ಅಂಶದ ಬೇಡಿಕೆಯಾಗಿದ್ದು, ಅದು ಕೇವಲ ಒಳ ಮೀಸಲಾತಿಯದ್ದಾಗಿರುತ್ತದೆ. ಅದರಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಅತ್ಯಂತ ಹಿಂದುಳಿದ ಅಸ್ಪೃಶ್ಯ ಜಾತಿಗಳಿಗೆ ಅವರ ಜನ ಸಂಖ್ಯೆಗನುಗುಣವಾಗಿ ಒಳಮೀ ಸಲಾತಿ  ನೀಡ ಬಹುದು ಎಂಬ ಸಲಹೆ ನೀಡಿರುವುದು ಶತಮಾನಗಳಿಂದ ತುಳಿತಕ್ಕೆ ಒಳಗಾದ ಮಾದಿಗ ಮತ್ತು ಹೊಲೆಯ ಸಮುದಾಯಗಳಿಗೆ ಉಸಿರು ಬಂದಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಸದಾಶಿವ ಆಯೋಗದ ವರದಿಗೆ ಬೆಂಬಲ ವ್ಯಕ್ತಪಡಿಸಿ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಡಾ.ಜಗನ್ನಾಥ್ ಮಾತನಾಡಿ, ವರದಿಯಲ್ಲಿ ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು ಮೊದಲನೆಯದರಲ್ಲಿ ಮಾದಿಗ ಮತ್ತು ಹೊಲೆಯ ಸಮುದಾಯಗಳಿಗೆ ಶೇ. 6, ಎರಡನೆಯದಾಗಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಶೇ. 5,  ಇನ್ನುಳಿದ ತಳ ಸಮುದಾಯಗಳಿಗೆ ಶೇ. 3, ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1 ರಷ್ಟು ಮೀಸಲಾತಿ ನೀಡಬೇಕೆಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ವರದಿಯಲ್ಲಿ ಈಗಿರುವ ಯಾವುದೇ ಪರಿ ಶಿಷ್ಟ ಜಾತಿಯ ಸಮು ದಾಯಗಳನ್ನು ಮೀಸಲಾತಿ ಯಿಂದ ಹೊರಗಿಡ ಬೇಕೆಂದು ಎಲ್ಲೂ ಹೇಳಿರುವುದಿಲ್ಲ. ಆದರೆ, ಭೀತಿಯಲ್ಲಿರುವ ನಮ್ಮ ಸಹೋದರ ಸಮುದಾಯದವರು ವಿನಾಕಾರಣ ವರದಿಯನ್ನು ವಿರೋಧಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ತಿಳಿಸಿದರು.

ಜಿಲ್ಲಾ ಬಿ ಎಸ್ ಪಿ  ಅಧ್ಯಕ್ಷ  ಡಿ.ಹನು ಮಂತಪ್ಪ ಮಾತನಾಡಿದರು. ಪತ್ರಿಕಾಗೋಷ್ಠಿ ಯಲ್ಲಿ ನಗರಸಭಾ ಸದಸ್ಯ ಆಟೋ ಹನುಮಂತಪ್ಪ, ಎಂ.ಎನ್.ನಾಗೇಂದ್ರಪ್ಪ, ಬಿ ಎಸ್ ಪಿ ಡಿ.ಹನುಮಂತಪ್ಪ, ಬಿ.ಎನ್. ರಮೇಶ್, ಎಂ.ಎಸ್. ಶ್ರೀನಿವಾಸ್, ಎಸ್.ಕೇಶವ, ಜಿ.ಶಂಕರ ಮೂರ್ತಿ, ಚಲವಾದಿ ಸಮಾಜದ ನಿವೃತ್ತ ಇಂಜಿನಿಯ ರ್ ಉ ಮಾಮಹೇಶ್ವರ್, ಎಂ.ಎಸ್.ಆನಂದ್ ಕುಮಾರ್, ಮಂಜು ಕೊಪ್ಪಳ, ಆರ್.ಆನಂದ್, ವೈ.  ಬಿ. ಪ್ರಭಾಕರ್, ಸಿ.ನಾಗರಾಜ್, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.