ಅಭಿಯಂತ ಕೂಟಂ ದಿಕ್ತಟದಿ ನೋಟಂ

ಅಭಿಯಂತ ಕೂಟಂ ದಿಕ್ತಟದಿ ನೋಟಂ

ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯು ಅರ್ಥಪೂರ್ಣ ಹಾಗೂ ಲಾಭದಾಯಕ ವೃತ್ತಿಯಲ್ಲಿ ತೊಡಗಿದಾಗ ಮಾತ್ರ ಅದರ ಸರ್ವತೋಮುಖ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ದೇಶದ ಪ್ರತಿಯೊಬ್ಬ ಪ್ರಜೆಗೂ ಇದರಿಂದ ನಿರೀಕ್ಷಿ ಸಲ್ಪಟ್ಟ ಅನುಕೂಲವಾಗುತ್ತದೆಂಬುದು ಇದರರ್ಥ. ಪ್ರತಿ ಯೊಂದು ಕ್ಷೇತ್ರ ಇತರೆ ಕ್ಷೇತ್ರಗಳಿಗೆ ಪೂರಕವಾಗಿರುವುದೂ ಅಲ್ಲದೇ ಇತರೆ ಕ್ಷೇತ್ರಗಳಿಂದ ಪ್ರೇರಣೆಗೊಳ್ಳುವುದು. 

ಇಂದು ನಾವೆಲ್ಲರೂ ವೈಜ್ಞಾನಿಕ ಯುಗದಲ್ಲಿದ್ದೇವೆ. ನಮಗೆ ತಿಳಿದಂತೆ ವಿಜ್ಞಾನ ಹಾಗೂ ತಂತ್ರಜ್ಞಾನಗಳು ತಮ್ಮ ಹಿರಿಮೆಯನ್ನು, ಪ್ರಾಮುಖ್ಯತೆಯನ್ನು ಪ್ರಪಂಚದ ಎಲ್ಲಾ ಮೂಲೆ-ಮೂಲೆಗಳಲ್ಲಿ ಸಾದರಪಡಿಸುತ್ತಿವೆ. ಇವೆರಡೂ ಪ್ರತಿ ದೇಶದ ಪ್ರತಿಯೊಬ್ಬ ಪ್ರಜೆಯ ಅರ್ವಾಚೀನ ಅವಶ್ಯಕತೆಗಳಾಗಿವೆ. ಈ ಕ್ಷೇತ್ರಗಳ ಪಡಿನೆರಳಿನಲ್ಲಿ ಆದ್ಯರಿಗೆ ಉದ್ಯಮಿತನದ ತರಬೇತಿ ನೀಡುವುದು, ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ಸಹಾಯ ಮಾಡುವುದು, ಕೈಗಾರಿಕಾ ನೆಲೆಗಳ ನಿರ್ಮಾಣ, ಯಾಂತ್ರಿಕ ಸಾಮಗ್ರಿಗಳನ್ನು ನೀಡಿ, ಕಂತುಗಳಲ್ಲಿ ಹಣ ಮರುಪಾವತಿಯ ಸೌಲಭ್ಯ ಇತ್ಯಾದಿಗಳನ್ನು ಒದಗಿಸಿದಾಗ ದೇಶ ತನಗರಿವಿಲ್ಲದೆ ಜ್ಯೋತಿಶ್ಯರೀರಿಯಾಗಿ, ವ್ಯಷ್ಟಿರೂಪವಾದ ವ್ಯಕ್ತಿ, ದೇಶಕ್ಕೆ ಸಮಷ್ಠಿರೂಪವಾಗಿ, ಸಕಲತೆಯ ಗಂತವ್ಯ ಮತ್ತು ಗಮ್ಯವಾಗಿಸಿ ಲೀಲಾಸ್ಥೂಲ ಅಭಿವೃದ್ಧಿಯು ಸರ್ವದಾ ಧಾರಣೆಯಾಗಬಲ್ಲದು. 

ವ್ಯಕ್ತಿ, ಸಮಾಜ, ರಾಷ್ಟ್ರದ ಅಭಿವೃದ್ಧಿ, ವಿಕಾಸಗಳಿಗೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಯೋಜನೆ ಮತ್ತು ಯೋಚನೆ ಸುಸಜ್ಜಿತ ರೀತಿಯಲ್ಲಿ ಕ್ರಿಯಾ ಪ್ರಾಪ್ತವಾ ಗುವಂತೆ ಕ್ರಮಯುಕ್ತವಾಗಿ ಕಾಲೋಚಿತವಾಗಿ ಸಂಯೋಜಿ ತವಾಗಿ, ಪ್ರತಿಕಂಪಿಸುವ ವೀಣೆಯು ಜ್ವಲ ತಂತ್ರಿಯಂತೆ ಮೊಳಗಿದಾಗ ಶ್ರೇಯೋಭಿವೃದ್ಧಿಯನ್ನು ಕಾಣಲು ಸಾಧ್ಯ ವೆಂದು ಹಾಗೂ ಸಮಾಜ ಜೀವನವು ಪರಿಶುದ್ಧವಾ ಗಬೇಕಾದರೆ ಸತ್ಯದ ಜೊತೆಯಲ್ಲಿ ಅಹಿಂಸೆ, ಕಾರ್ಯಶ್ರದ್ಧೆ, ಸ್ನೇಹಪರತೆ, ಅನುಕಂಪ, ಸಹಿಷ್ಟುತೆ, ಸಹೃದಯ ಭಾವ, ಪರೋಪಕಾರ ಗುಣ ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವೆಂದು ಅಭಿಯಂತ ವಲಯ (Engineer sector)  ಪ್ರತಿಪಾದಿಸಿದೆ. 

ವಿಶ್ವದ ದೃಷ್ಟಿಯಲ್ಲಿ ಪ್ರಾಣಿ ವರ್ಗಕ್ಕಿಂತ ಮನುಷ್ಯ ಕುಲವು ಕೆಲವು ಶ್ರೇಷ್ಠವಾದ ಗುಣಗಳಿಂದ ಕೂಡಿದೆ. ಪ್ರಾಣಿಗಳಿಗಿಲ್ಲದಿರುವ ಸೂಕ್ಷ್ಮದೃಷ್ಠಿ (Micro approach), ಸ್ಥೂಲ ದೃಷ್ಟಿ (Macro approach), ಬಾಹ್ಯತೆ ಅರಿವು (Special awareness), ಆಯಸ್ಕಾಂತೀಯ ತರಂಗ ಚಿತ್ರದಾಯಕ (Magnetic resonance imaging), ಆಂತರಿಕ ಮನೋಮಯ ಸ್ಥಿತಿ (Internal psychological states of the mind), ಗಾತ್ರ ಮತ್ತು ತೂಕ (Size & Weight) ಇತ್ಯಾದಿಗಳನ್ನೊಳಗೊಂಡ ಯೋಗ್ಯನಾದ ವ್ಯಕ್ತಿ ತಾನು ಸುಖವಾಗಿಯೂ, ಸಂತೋಷವಾಗಿಯೂ ಬದುಕುವುದಕ್ಕೆ ಪ್ರಯತ್ನಿಸುವುದಲ್ಲದೇ, ತನ್ನ ನೆರೆಹೊರೆ, ಸಮಾಜ ಮತ್ತು ದೇಶಬಾಂಧವರು ಕೂಡಾ ಸುಖ-ಸಂತೋಷಗಳಿಂದ ಬದುಕಿ ಬಾಳಲು ಪ್ರಯತ್ನಿಸುತ್ತಾನೆ ಅಲ್ಲದೇ ಇವು ಪರಸ್ಪರ ಸಂಬಂಧವುಳ್ಳವುಗಳು ಎಂಬ ಭಾವನೆಯ ಗಂಗಾ ಪ್ರವಾಹ ದಂತೆ ಮುಂದುವರೆದುಕೊಂಡು ಬರುವಂತೆ ಮಾಡುವವನೇ ಚಲನಶೀಲಗತಿಕ; ಈತನೇ ಮಂತ್ರಶಕ್ತಿದಾಯಕ. ಪ್ರತಿ ಕ್ಲಿಷ್ಟ ಸನ್ನಿವೇಶವನ್ನು ಲಾಭದಾಯಕವಾಗಿ ರೂಪಿಸಿಕೊಳ್ಳುವುದೇ ಬೆಳೆಯುವಿಕೆಯ ಲಕ್ಷಣೋತ್ಪನ್ನಲಕ್ಷಣ. ಜೀವನಕ್ಕೆ ‘ವರುಷಗಳನ್ನು ರೂಪಿಸುವುದು’ ಎಂದರೆ ವಯಸ್ಸಾಗುವುದು; ಬೆಳೆಯುವುದು ಎಂದರೆ, ‘ವಯಸ್ಸಿಗೆ ಪ್ರಾಣವನ್ನು ಕೂಡಿಸುವುದು’ ಅಂದರೆ ಜೀವನದ ಕ್ರಿಯಾಶೀಲ (Life programme) ಉತ್ಸಾಹವನ್ನು ಮುಪ್ಪಿನವರೆಗೂ ಮುಟ್ಟಿಸುವುದೇ ಸರ್ ಎಂ.ವಿ.ಯವರ ಚಿರಂತನ ರಹಸ್ಯ (Perennial interest) ವಾಗಿತ್ತು. 

ಪ್ರಕೃತಿಯಿಂದ ಕಲಿತುಕೊಂಡು ಜೀವನದ ಸತ್ಯ-ಸತ್ವವನ್ನು ಒಪ್ಪಿಕೊಂಡು ಯಶಸ್ವೀ ವ್ಯಕ್ತಿಯ ನಿಜ ಜೀವನದ ಸನ್ನಿವೇಶವನ್ನು ದೃಷ್ಟಿಸಿಕೊಂಡು, ಸೋಲುಗಳು ಕಲಿಯುವ ಸದಾವಕಾಶಗಳೆಂದು ಭಾವಿಸಿಕೊಂಡು, ಸಶಕ್ತ ಮನೋವೃತ್ತಿ ಯನ್ನು ಕರಗಿಸಿಕೊಂಡು, ನೋವು-ನಲಿವುಗಳನ್ನು ವಿಭಿನ್ನ ದೃಷ್ಟಿಯಿಂದ ನೋಡುವುದನ್ನು ಬೆಳೆಸಿಕೊಂಡು ಸ್ವಯಂ ಪ್ರೇರಿತ ಕಾರ್ಯಾಸಕ್ತರಾಗಲು ಮನಃಪಟಲವನ್ನು ಉತ್ತೇಜಿ ಸಿಕೊಂಡು, ಶುದ್ಧ ಪ್ರೇಮವನ್ನು ಮುಡಿಗೇರಿಸಿಕೊಂಡು ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿಕೊಂಡು ಸುರ್ವಾರ್ತೆಗಳನ್ನು ಬಿತ್ತರಿಸುತ್ತಾ ‘ನನಗೆ ಸಾಧ್ಯ’ ಎಂಬು ದನ್ನು ಪ್ರಮಾಣೀಸಿಕೊಂಡು, ಆಳವಾದ ಕನಸೇ ಸುಶಾಂತ ತೆಯ (A deep dream of peace) ಅಡಿಗಲ್ಲು. ವಿಚಾರ ಮತ್ತು ಕ್ರಿಯಾತ್ಮಕತೆಯ ನಡುವಣ ಸಮತ್ವ (Balance between thought and action), ವಿಶ್ವಮಧ್ಯದಲ್ಲಿ ನಾವು (We are the center of the univers) ಗಳು, ಆಂತರಿಕ ಬೆಳವಣಿಗೆಯ ತಾಂತ್ರಿಕತೆ (A Technology for inner growth)  ಯನ್ನು ಮೇಳೈಸಿಕೊಂಡು ನಾವು ಅವಧೂತರಾಗಿ ಉದ್ವಾಸ್ತವಿಕ ಸ್ಥಾನವನ್ನು ಅಧಿಕೃತವಾಗಿ ಪಡೆದಾಗ ಯಾವುದಕ್ಕೂ ಬೆದರದೇ (Don’t care) ನಾನು ನಾನೇ ಇದ್ದೇನೆ ಎಂದಾಗ (I am my self) ಎಂದು ದಿವ್ಯತೆಯನ್ನು ಶಾಕ್ತತೆಯನ್ನು ಸಾಕ್ಷಾತ್ಕರಿಸಿ (Revelation) ಕೊಳ್ಳುವಲ್ಲಿ ಪ್ರಬಲರಾಗುತ್ತೇವೆ ಎನ್ನುವ ಪರಿಪೂರ್ಣತೆ ಸರ್ ಎಂ.ವಿ.ಯವರ ಕಾಂತಿಪುಂಜ (Radiant orb)  ವಾಗಿತ್ತು.

ದುರದೃಷ್ಟವಶಾತ್ ಇಂದು ಶೋಚನೀಯ ಪರಿಸ್ಥಿತಿಗೆ ಒಳಗಾಗಿದ್ದೇವೆ. ಅಂದರೆ, ನಮ್ಮ ಇಂಜಿನೀಯರ್‍ಗಳು ಒಂದು ಸಂಶೋಧನೆ ಮಾಡಿ, ಹೊಸ ತಂತ್ರಜ್ಞಾನ, ಯೋಜನಾ ಜ್ಞಾನ ರೂಪಿಸುವಲ್ಲಿ ಹಳವಂಡಗಳಾಗುತ್ತಿದ್ದಾರೆ. ಏಕಾಗ್ರ ಕಲಿಕೆ Constent learning), ದರ್ಶನ (Vision), ದೂರದೃಷ್ಟಿ (Foresightedness), ಸ್ವಯಂ ಋಜುತೆ (Self righteousness), ಜಾಗತಿಕ ಜ್ಞಾನ Globlised knowledge) ವನ್ನು ಸ್ಥಳೀಯ ಜ್ಞಾನ (Localise Knowledge)ಕ್ಕಿಳಿಸುವ, ಜ್ಞಾನದ ಬೆನ್ನಟ್ಟು (Pursute of knowledge) ವಿಕೆ, ತಿರುಳು ವಲಯ (Core sector) ದಿಂದ ದೂರೀಕೃತರಾಗಿ, ಹುಚ್ಚು ಹಿಡಿಸುವ ವಲಯ Driven sector) ದ ಅವಕುಂಠನ ಧರಿಸಿ, ಸೇವಾಕೃತ (Service) ಸಂಶೋಧನೆ (Recearch) ಫಲಾಭಿವೃದ್ಧಿ Product development), ನವೀನ ಸಂಸ್ಕೃತಿ (innovation cluture) ಯನ್ನು ಬಿತ್ತುವಲ್ಲಿ ನಮ್ಮ ಮೇಲ್ಮಟ್ಟ ಮೇಧಾಶಕ್ತಿ (Topnotch talent)  ಯನ್ನು ರೂಪಗೈಯ್ಯುವ ಪದವಿ (Gradutes) ಧರರಾಗಲೇ ಇಲ್ಲವೆಂಬ ಅತ್ಯಂತ ಕೊರಗೊಂದು ಕಾಡುತ್ತಿದೆ. 

ಪ್ರತಿವರ್ಷ ಗತಿಸಿದ ವಿಭೂತಿ ಪುರುಷ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟುಹಬ್ಬವನ್ನು ‘ಇಂಜಿನೀಯರ್ ಡೇ’ ಎಂದು ಆಚರಿಸುವುದರಲ್ಲಿ ಅಖಂಡ ಭಾಗವೇ ಆಗಿರುವ ಕೆಲವು ಮಹೋನ್ನತ ವ್ಯಕ್ತಿಗಳಾದ ಎಂ.ವಿ. ಸತೀಶ್ ಧವನ್, ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ, ಇ. ಶ್ರೀಧರನ್, ಶ್ರೀ ರಘುರಾಮ್ ಗೋವಿಂದರಾಜ್, ಸುಂದರ್ ಪಿಚಾಯ್, ಶ್ರೀ ಸತ್ಯ ನಡೇಲಾ, ವರ್ಗೀಸ್ ಕುರಿಯನ್, ಎಂ.ಎಸ್. ತಿರುಮಲೆ ಅಯ್ಯಂಗಾರ್, ಎಸ್.ಜಿ. ಬಾಳೇಕುಂದ್ರಿ,  ಜಿ. ಬಲ್ಲಾಳ್,  ಬಾತಿ ರೇವಣಸಿದ್ದಪ್ಪ ಇನ್ನೂ ಮೊದಲಾದ ಅಭಿಯಂತರರನ್ನು ಸಂಸ್ಮರಣೆಗೈಯುವುದು ಸ್ಪರ್ಶೇಂದ್ರೀಯ. ಮೇಲೆ ಕಾಣಿಸಿದ ಮಾನ್ಯರು ಸಿದ್ಧ ಮಾದರಿಯನ್ನು ಮುರಿದು ಕಟ್ಟುವ ಮತ್ತು ವರ್ತಮಾನಕ್ಕೆ ಮುಖಾಮುಖಿಯಾಗಿಸುವ, ನವೀನ ಯೋಜನೆ, ಹೊಸ ಹುಡುಕಾಟ, ಸಮಕಾಲೀನ ಜ್ವಲಂತ ಸಮಸ್ಯೆಗಳನ್ನು ಜತನವಾಗಿಸಿಕೊಂಡು, ಸಮಾಜಕಾರಣ, ಅರ್ಥಕಾರಣ, ಯೋಜನಾಕಾರಣ, ಉತ್ಪತ್ತಿಕಾರಣಗಳನ್ನು ಕಾಲೋಚಿತಗೊಳಿಸುವಲ್ಲಿ ಸಿರಿ ವಾರಿಜಾತ; ವರಪಾರಿಜಾತ; ಉದ್ಬುದ್ಧ ಶುದ್ಧರಾದ  ಅಭಿಯಂತ ಸಂದೋಹಕ್ಕೆ ಅನೂನ-ಅನನ್ಯ-ಅನಂತ ನಮನಂಗಳ್.


ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರರು,
ದವನ ಕಾಲೇಜು, ದಾವಣಗೆರೆ.
ಮೊ: 8884527130

Leave a Reply

Your email address will not be published.