267 ಪಾಸಿಟಿವ್ 484 ಬಿಡುಗಡೆ

ದಾವಣಗೆರೆ, ಸೆ. 12- ಜಿಲ್ಲೆಯಲ್ಲಿ 267 ಕೊರೊನಾ ಪಾಸಿಟಿವ್ ಪ್ರಕರಗಳು ಶನಿವಾರ ದೃಢಪಟ್ಟ ವರದಿಯಾಗಿದೆ. 

ಹರಿಹರದ ಕುಮಾರ ಪಟ್ಟಣಂನ 65 ವರ್ಷದ ಪುರುಷ  ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇಂದು 484 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದು, ಒಟ್ಟಾರೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ 9971 ಜನರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 12753 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಪ್ರಸ್ತುತ 2557 ಸಕ್ರಿಯ ಪ್ರಕರಣಗಳಿವೆ.


ಮಲೇಬೆನ್ನೂರು ಹೋಬಳಿಯಲ್ಲಿ 33 ಜನರಿಗೆ ಪಾಸಿಟಿವ್‌

ಮಲೇಬೆನ್ನೂರು : ಶನಿವಾರ ಹೋಬಳಿಯಲ್ಲಿ 33 ಜನರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

ಮಲೇಬೆನ್ನೂರಿನಲ್ಲಿ 10 ಜನರಿಗೆ, ಹೊಳೆಸಿರಿಗೆರೆಯಲ್ಲಿ ನಾಲ್ವರಿಗೆ, ಜಿ.ಬೇವಿನಹಳ್ಳಿಯಲ್ಲಿ ನಾಲ್ವರಿಗೆ, ಭಾನುವಳ್ಳಿಯಲ್ಲಿ ಇಬ್ಬರಿಗೆ, ಕೊಪ್ಪದಲ್ಲಿ ಇಬ್ಬರಿಗೆ, ಹಾಲಿವಾಣದಲ್ಲಿ ಇಬ್ಬರಿಗೆ ಹಾಗೂ ವಾಸನ, ಹೊಸಪಾಳ್ಯ, ನಂದಿಗಾವಿ, ಕೊಕ್ಕನೂರು, ಜಿಗಳಿ, ನಿಟ್ಟೂರು, ಬೂದಿಹಾಳ್‌, ನಂದಿತಾವರೆ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

110 ಜನರಿಗೆ ಟೆಸ್ಟ್‌ : ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ನಂದಿಗಾವಿ ಗ್ರಾಮದಲ್ಲಿ ಶನಿವಾರ 110 ಜನರಿಗೆ ಕೊರೊನಾ ಟೆಸ್ಟ್‌ ಮಾಡಲಾಗಿದ್ದು, 11 ಜನರಿಗೆ ಪಾಸಿಟಿವ್‌ ಬಂದಿದೆ ಎಂದು ಹೇಳಲಾಗಿದೆ. 

Leave a Reply

Your email address will not be published.