ಪೊಲೀಸರಿಗೆ ಈಗ ಕಾನೂನಿನ ಅರಿವಾಗಿದೆಯೇ?

ಮಾನ್ಯರೇ,

ಸಮಾಜದಲ್ಲಿ ಯಾವುದೇ ಅವೈಜ್ಞಾನಿಕ ಹಾಗೂ ನಿಯಮಗಳ ವಿರುದ್ಧವಾಗಿ ವಸ್ತುಗಳನ್ನು ಉತ್ಪಾದನೆ ಮಾಡುವುದೇ ಕಾನೂನು ಬಾಹಿರವಾಗಿದೆ. ಇದರಲ್ಲಿ ಹೆಲ್ಮೆಟ್ ಕೂಡಾ ಒಂದು. ಇದನ್ನು ಅರಿತರೂ ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ ಕೋಟ್ಯಾಂತರ ಅರ್ಧ ಹೆಲ್ಮೆಟ್‌ಗಳನ್ನು ಉತ್ಪಾದನೆ ಮಾಡಲು , ಮಾರಾಟ ಮಾಡಲು ಬಿಟ್ಟು, ಕೊರೊನಾದಿಂದ ಬಸವಳಿದ ಇಂತಹ ವೇಳೆಯಲ್ಲಿ ಏಕಾಏಕಿ ಎದ್ದು ನಿಂತ ಪೊಲೀಸರಿಗೆ ಈಗ ಅರ್ಧ ಹೆಲ್ಮೆಟ್ ಕಾನೂನು ಬಾಹಿರ ಎಂದು ಅರಿವಾಗಿದೆಯೇ…?

ಜನರ ಹೆಲ್ಮೆಟ್‌ಗಳನ್ನು ರಸ್ತೆಯಲ್ಲೇ ಜನರಿಂದ ಪಡೆದು ಎಸೆಯುತ್ತಿರುವುದು ಖಂಡನೀಯ. ನಿಯಮ ಬಾಹಿರವಾಗಿ ಐಎಸ್‌ಐ ಪ್ರಾಮಾಣಿತ ವಲ್ಲದ ಹೆಲ್ಮೆಟ್‌ಗಳನ್ನು ಉತ್ಪಾದನೆ ಮಾಡಲು ಬಿಟ್ಟವರು ಯಾರು? ಅಕ್ರಮವಾದ ಹೆಲ್ಮೆಟ್ ಉತ್ಪಾದಕರಿಗೆ ಒಂದು ಕಾನೂನು, ಸಾರ್ವಜನಿ ಕರಿಗೆ ಒಂದು ಕಾನೂನು ಇದೆಯೇ…?

– ಪವನ್ ರೇವಣಕರ್, ಅಧ್ಯಕ್ಷರು, ಎಬಿವಿಪಿ, ದಾವಣಗೆರೆ.