ಪ್ಲಾಸ್ಟಿಕ್ ಪ್ರೇಮ ನಿವೇದನೆ

ಪ್ಲಾಸ್ಟಿಕ್ ಪ್ರೇಮ ನಿವೇದನೆ

ಸುಟ್ಟರೆ ವಿಷಗಾಳಿಯಾದೆ
ಅಸ್ತಮಾ, ಕ್ಯಾನ್ಸರ್ ತರುವೆ
ಇಷ್ಟಾದರೂ ನನ್ನನ್ನು ಬಿಡದೆ ಹಿಡಿದೆ
ನಿನ್ನ ಔದಾರ್ಯ ಬಲು ದೊಡ್ಡದು ಮಾನವ.

ಹೂಳಿದರೆ ಅಂತರ್ಜಲಕ್ಕೆ ಹಾನಿ ತರುವೆ
ಹಳ್ಳಿ ನಗರಗಳ ಸ್ವಚ್ಛತೆಗೆ ಭಂಗ ತರುವೆ
ನೀರಿನ ಮೂಲಗಳಾದ ಹಳ್ಳ, ನದಿ, ಕೆರೆಗಳ
ಜಲಚರಗಳ ಸಾಯಿಸಿ,
ಅವುಗಳ ಆರೋಗ್ಯ ಹಾಳುಗೆಡಿಸುವೆ…
ಇಷ್ಟಾದರೂ ನನ್ನ ಬಿಡದೆ ಹಿಡಿದೆ
ನಿನ್ನ ಔದಾರ್ಯ ಬಲು ದೊಡ್ಡದು ಭಲೇ ಮಾನವ…

ಮಳೆಗಾಲದಲ್ಲಿ ಸೊಳ್ಳೆಗಳಿಗೆ ಆಶ್ರಯ ನೀಡಿ
ನಿನಗೆ ಮಾರಕ ರೋಗಗಳ ತರುವೆ
ಪಶುಗಳ ಉದರ ಹರಿದೆ, ಪಕ್ಷಿಗಳ ಅಧರ ಇರಿದೆ,
ಇಷ್ಟಾದರೂ ನನ್ನ ಬಿಡದೆ ಹಿಡಿದೆ
ನಿನ್ನ ಔದಾರ್ಯ ಬಲು ದೊಡ್ಡದು, ಭಲೇ ಮಾನವ.

ಹಲವು ವನ್ಯ ಜೀವಿಗಳ ಸಾವಿಗೆ ಕಾರಣವಾಗುತ್ತಿರುವೆ
ಹಸಿರು ಮನೆ ಅನಿಲಗಳನ್ನು 

ಅಪಾರ ಪ್ರಮಾಣದಲ್ಲಿ ಬಿಡುಗಡೆ ಮಾಡಿ
ನಿಮ್ಮನ್ನೆಲ್ಲ ಓಜೋನ್ ನಾಶ, ಜಾಗತಿಕ
ತಾಪಮಾನ ಏರಿಕೆ, ಹವಾಮಾನ ವೈಪರೀತ್ಯದಂತಹ
ಗಂಭೀರ ಸಮಸ್ಯೆಗಳಲ್ಲಿ ಬಂಧಿಸುತ್ತಿರುವೆ
ಇಷ್ಟಾದರೂ ನನ್ನ ಬಿಡದೆ ಹಿಡಿದೆ,
ನಿನ್ನ ಔದರ್ಯ ಬಲು ದೊಡ್ಡದು, ಭಲೇ ಮಾನವ.


ಸಂಜಯ್‌ ಹೊಯ್ಸಳ

Leave a Reply

Your email address will not be published.