ಭಾರೀ ಮಳೆ : ಗುಳದಹಳ್ಳಿ-ಸಂಕ್ಲೀಪುರ ರಸ್ತೆ ಸಂಪರ್ಕ ಕಡಿತ, 380 ಎಕರೆ ಭತ್ತ ಜಲಾವೃತ

ಭಾರೀ ಮಳೆ : ಗುಳದಹಳ್ಳಿ-ಸಂಕ್ಲೀಪುರ ರಸ್ತೆ ಸಂಪರ್ಕ ಕಡಿತ, 380 ಎಕರೆ ಭತ್ತ ಜಲಾವೃತ

ಮಲೇಬೆನ್ನೂರು, ಸೆ. 9- ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗುಳದಹಳ್ಳಿ ಬಳಿ ಹಳ್ಳದ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಗುಳದಹಳ್ಳಿ-ಸಂಕ್ಲೀಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ನೂರಾರು ಎಕರೆ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಮನೆಗಳಿಗೆ ಹಾನಿಯಾಗಿದೆ. ಕುಂಬಳೂರಿನಲ್ಲಿ 40 ಎಕರೆ, ನಿಟ್ಟೂರಿನಲ್ಲಿ 60 ಎಕರೆ, ಆದಾಪುರದಲ್ಲಿ 100 ಎಕರೆ, ಸಂಕ್ಲೀಪುರದಲ್ಲಿ 40 ಎಕರೆ, ಗುಳದಹಳ್ಳಿಯಲ್ಲಿ 30 ಎಕರೆ, ಕುಣೆಬೆಳಕೆರೆಯಲ್ಲಿ 70 ಎಕರೆ, ಹೊಸಹಳ್ಳಿಯಲ್ಲಿ 10 ಎಕರೆ ಮತ್ತು ಜಿಗಳಿಯಲ್ಲಿ ಸುಮಾರು 30 ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ಬಿಳಸನೂರು, ಜಿ.  ಬೇವಿನಹಳ್ಳಿ, ಹರಳಹಳ್ಳಿಯಲ್ಲಿ ತಲಾ ಒಂದೊಂದು ವಾಸದ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಸ್ಥಳ ಪರಿಶೀಲಿಸಿದ  ಉಪ ತಹಶೀಲ್ದಾರ್ ಆರ್. ರವಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.