ಕೊಮಾರನಹಳ್ಳಿ ಬಳಿ ಕಿರು ಜಲಪಾತ

ಕೊಮಾರನಹಳ್ಳಿ ಬಳಿ ಕಿರು ಜಲಪಾತ

ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗುಡ್ಡದಲ್ಲಿ ಕಿರು ಜಲಪಾತ ಸೃಷ್ಠಿಯಾಗಿದ್ದು, ಜನರನ್ನು ಆಕರ್ಷಿಸುತ್ತಿದೆ. ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಈ ಜಲಪಾತ ಇರುವುದರಿಂದ ರಸ್ತೆ ಪ್ರಯಾಣಿಕರೂ ಮಿಂಚುಳ್ಳಿ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. 

ಗುಡ್ಡದಲ್ಲಿ ಹರಿದು ಬರುವ ಈ ನೀರು ಕೊಮಾರನಹಳ್ಳಿ ಕೆರೆಗೆ ಸೇರುತ್ತದೆ. ರಾತ್ರಿ ಸುರಿದ ಮಳೆಯಿಂದ ಕೊಮಾರನಹಳ್ಳಿ ಕೆರೆಗೂ ಅರ್ಧ ಅಡಿ ನೀರು ಬಂದಿದೆ ಎನ್ನಲಾಗಿದೆ.

Leave a Reply

Your email address will not be published.