ಹರಿಹರ : ಪೋಷಣ್ ಮಾಸಾಚರಣೆಗೆ ಶಾಸಕ ರಾಮಪ್ಪ ಚಾಲನೆ

ಹರಿಹರ : ಪೋಷಣ್ ಮಾಸಾಚರಣೆಗೆ ಶಾಸಕ ರಾಮಪ್ಪ ಚಾಲನೆ

ಹರಿಹರ, ಸೆ. 8 – ಇಲ್ಲಿನ ಶಿಶು ಅಭಿವೃದ್ಧಿ ಯೋಜನೆ ಕಛೇರಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ  ಪೋಷಣ್ ಅಭಿಯಾನ ಮಾಸಾಚರಣೆ’ ಕಾರ್ಯಕ್ರಮವನ್ನು ಶಾಸಕ ರಾಮಪ್ಪ ಉದ್ಘಾಟಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಹರಿಹರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳಾದ ಎಸ್.ಎಸ್. ಜ್ಯೋತಿ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇ.ವೈ. ಪ್ರಿಯದರ್ಶಿನಿ ಭಾಗವಹಿಸಿದ್ದರು.

ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ತೀವ್ರ ಅಪೌಷ್ಠಿಕತೆಯನ್ನು ಗುರುತಿಸುವುದು ಮತ್ತು ಚಿಕಿತ್ಸೆ ನೀಡುವುದು,  ಅಪೌಷ್ಠಿಕತೆಯನ್ನು ಮತ್ತು ರಕ್ತ ಹೀನತೆಯನ್ನು ತಡೆಗಟ್ಟುವುದು ಮಾಸಾಚರಣೆಯ ಮುಖ್ಯ ಉದ್ದೇಶಗಳಾಗಿರುತ್ತದೆ. 

Leave a Reply

Your email address will not be published.