ಹರಿಹರ : ಕೊಂಡಜ್ಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಹರಿಹರ : ಕೊಂಡಜ್ಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಹರಿಹರ, ಸೆ.8- ತಾಲ್ಲೂಕಿನ ಕೊಂಡಜ್ಜಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಮುಖ್ಯ ಶಿಕ್ಷ ಬಿ. ಹನುಮಂತಪ್ಪ ರಾಧಾಕೃಷ್ಣನ್ ಅವರ ಶಿಕ್ಷಣ ಮತ್ತು ತತ್ವಜ್ಞಾನ ಮತ್ತು ಶಿಕ್ಷಕರ ಅಭಿಮಾನದ ಕುರಿತು ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಜಿ. ಪರಮೇಶ್ವರಪ್ಪ, ಸದಸ್ಯರಾದ ಪರಶುರಾಮ್ ಉಪಸ್ಥಿತರಿದ್ದರು. ಶಿಕ್ಷಕ ಜೆ. ಶಾಂತಕುಮಾರಿ, ಕೆ. ಸಾವಿತ್ರಮ್ಮ, ಸಿ. ಜ್ಯೋತಿ, ಜಾಕೀರ್‌ ಹುಸೇನ್, ಹೆಚ್. ಅಂಜನಾದೇವಿ, ಬಿ. ಚಂದ್ರಮ್ಮ, ಎಸ್. ಉಷಾ ಹಾಜರಿದ್ದರು. ಇದೇ ವೇಳೆ ಹರಿಹರ ತಾಲ್ಲೂಕು ಸ.ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕ ಆರ್.ಕೆ. ಸತ್ಯನಾರಾಯಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಅವರ ಸೇವೆಯನ್ನು ಸ್ಮರಿಸಲಾಯಿತು.

Leave a Reply

Your email address will not be published.