ಉಕ್ಕಡಗಾತ್ರಿ : ಅನ್ನ ದಾಸೋಹ ಪುನರಾರಂಭ

ಉಕ್ಕಡಗಾತ್ರಿ : ಅನ್ನ ದಾಸೋಹ ಪುನರಾರಂಭ

ಮಲೇಬೆನ್ನೂರು, ಸೆ. 7 – ಸುಕ್ಷೇತ್ರ ಉಕ್ಕಡಗಾತ್ರಿ ಯಲ್ಲಿ ಪವಾಡ ಪುರುಷ  ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನದಲ್ಲಿ ಕೊರೊನಾ ಕಾರಣದಿಂ ದಾಗಿ ನಿಲ್ಲಿಸಲಾಗಿದ್ದ ದಾಸೋಹ ಪ್ರಸಾದ ವ್ಯವಸ್ಥೆ  ಮತ್ತು ವಸತಿ ವ್ಯವಸ್ಥೆಯನ್ನು ವಿಶೇಷ ಪೂಜೆಯೊಂದಿಗೆ ಸೋಮವಾರದಿಂದ ಭಕ್ತರಿಗೆ ನೀಡಲಾಯಿತು.    

ದಾಸೋಹ ಮಂದಿರವನ್ನು ಸ್ವಚ್ಛ ಮಾಡಿ,  ಅಡುಗೆ ಮಾಡುವ ಮತ್ತು ವಿತರಿಸುವ ಸಾಮಗ್ರಿಗಳನ್ನು ಬಿಸಿ ನೀರಿನಿಂದ ಶುಚಿಗೊಳಿಸಿ ಪ್ರಸಾದವನ್ನು ವಿತರಿಸಲಾಯಿತು. ವಸತಿ ಗೃಹದಲ್ಲಿ ಉಳಿದು ಕೊಳ್ಳಲು ಬರುವ  ಭಕ್ತಾದಿಗಳಿಗೆ ಆಧಾರ್ ಕಾರ್ಡ್, ಫೋನ್ ನಂಬರ್, ಮಾಸ್ಕ್ ಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ, 

Leave a Reply

Your email address will not be published.