ಕಳ್ಳರ ಬಂಧನ : ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

ಕಳ್ಳರ ಬಂಧನ : ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

ದಾವಣಗೆರೆ, ಸೆ.1- ಮನೆಗೆ ಕನ್ನ ಹಾಕಿ ಚಿನ್ನಾ ಭರಣ ಮತ್ತು ನಗದು ದೋಚಿ ಪರಾರಿ ಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಮೂವರನ್ನು ಬಂಧಿಸಿ ಒಂದು ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದವರೆನ್ನಲಾದ ಹೊನ್ನೂರ್ ಸಾಬ್, ಸುಭಾನ್ ಸಾಬ್, ಸಂತೋಷ್ ಬಂಧಿತರು.

ಕಳೆದ ಮಾಹೆ ದಿನಾಂಕ 20ರ ರಾತ್ರಿಯಿಂದ ಹರಿಹರ ತಾಲ್ಲೂಕು ಅಮರಾವತಿಯ ಪ್ರಭುಗೌಡ ಅವರ ಮನೆಯಲ್ಲಿದ್ದ 1 ಲಕ್ಷ ರೂ. ಮೌಲ್ಯದ 25-30 ಗ್ರಾಂ ಬಂಗಾರದ ಒಡವೆ ಮತ್ತು 5 ಸಾವಿರ ನಗದನ್ನು ಬಂಧಿತರು ಕಳವು ಮಾಡಿಕೊಂಡು ಪರಾರಿಯಾಗಿದ್ದರು.‌ ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹರಿಹರ ಸಿಪಿಐ ಎಂ. ಶಿವಪ್ರಸಾದ್ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣಾ ಪಿಎಸ್ಐ ಡಿ. ರವಿಕುಮಾರ್ ಮತ್ತು ಸಿಬ್ಬಂದಿಗಳು  ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳು ಬಂಧಿತರಾಗಿದ್ದಾರೆ. 

Leave a Reply

Your email address will not be published.