ರಾಜ್ಯ ಬಿಜೆಪಿಯ 25 ಸಂಸದರು 'ಫೇಸ್ಲೆಸ್' (ಮುಖವಿಲ್ಲದ) ಆಗಿದ್ದಾರೆ. ಜಿಎಸ್ಟಿ ಪಾಲು ಹಾಗೂ ಪ್ರವಾಹ ಪರಿಹಾರವನ್ನು ಕೇಂದ್ರದಿಂದ ಕೇಳಲು ಇವರಿಗೆ ಧ್ವನಿಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಯಮ ಪಾಲಿಸಿ ಉಚ್ಚಂಗೆಮ್ಮ ದೇವಿ ದರ್ಶನ ಪಡೆಯಲು ತಹಶೀಲ್ದಾರ್ ಕರೆ
ದಿನಾಂಕ 1 ರ ಗುರುವಾರ ಅಧಿಕ ಹುಣ್ಣಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ದೇವಿ ದರ್ಶನಕ್ಕೆ ಬರುವ ಭಕ್ತರು ಸರ್ಕಾರದ ನಿಯಮಾವಳಿಯನ್ನು ತಪ್ಪದೇ ಪಾಲಿಸಬೇಕು.
ಡಾ|| ಮಹಾಂತ ಶಿವಾಚಾರ್ಯ ಸ್ವಾಮೀಜಿ ಜಯಂತಿ : ವೃದ್ಧರಿಗೆ ಸೀರೆ, ಪಂಚೆ ವಿತರಣೆ
ಶ್ರೀ 2008 ಲಿಂ|| ಡಾ|| ಮಹಾಂತ ಶಿವಾಚಾರ್ಯ ಸ್ವಾಮಿಗಳ ಅಭಿಮಾನಿಗಳ ಬಳಗ ಮತ್ತು ಸುವರ್ಣ ಕರ್ನಾಟಕ ವೇದಿಕೆ ವತಿಯಿಂದ ಶ್ರೀಗಳ 83ನೇ ಜಯಂತ್ಯೋತ್ಸವವನ್ನು ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ರೈತ ಗುಡ್ಡೆಪ್ಪ ಚಿನ್ನಿಕಟ್ಟಿಗೆ ಬಿಜೆಪಿ ಸನ್ಮಾನ
ಹರಿಹರ : ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದ ಗುಡ್ಡೆಪ್ಪ ಚಿನ್ನಿಕಟ್ಟಿ ಅವರನ್ನು ಹರಿಹರದ ಬಿಜೆಪಿ ಘಟಕದ ವತಿಯಿಂದ ಇಂದು ಸನ್ಮಾನಿಸಿ, ಗೌರವಿಸಿದರು.
ಜಗಳೂರು ತಾ.ನಲ್ಲಿ ಸೋಂಕಿನ ಪ್ರಮಾಣ ಏರಿಕೆ
ಜಗಳೂರು : ಸಹಜ ಸ್ಥಿತಿಯಲ್ಲಿರುವ ಜನರಲ್ಲಿಯೂ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದು ವಿಷಾದಕರವಾಗಿದೆ. ಇತ್ತೀಚೆಗೆ ಕೋವಿಡ್ನಿಂದ ಸ್ನೇಹಿತ, ಹಿತೈಷಿಗಳು ಮೃತಪಟ್ಟಿದ್ದು, ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ
ವೀರಶೈವ ಸಭಾದ ಜಿಲ್ಲಾ ಘಟಕದಿಂದ ತುಂಗಭದ್ರೆಗೆ ಬಾಗಿನ
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದಿಂದ ಹರಿಹರದ ತುಂಗಭದ್ರಾ ನದಿಗೆ ಇಂದು ಬಾಗಿನ ಅರ್ಪಿಸಲಾಯಿತು.
ಹೊನ್ನಾಳಿ ಸರ್ಕಾರಿ ನೌಕರರ ಮನವಿ
ಹೊನ್ನಾಳಿ : ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
ಜಿಲ್ಲೆಯಲ್ಲಿ ‘ಆರೋಗ್ಯ ಹಸ್ತ’ಕ್ಕೆ ಚಾಲನೆ
ಕೊರೊನಾ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ಕೊಡಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸುವ `ಆರೋಗ್ಯ ಹಸ್ತ' ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಲಾಗಿದೆ.
ಉಪ ಚುನಾವಣೆಗೆ ಬಿಜೆಪಿ ಸಿದ್ಧತೆ: ಕಟೀಲ್
ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಐದಾರು ಜನ ಆಕಾಂಕ್ಷಿಗಳಿದ್ದು, ಬೂತ್ ಮಟ್ಟದಲ್ಲಿ ಚುನಾವಣೆಯ ಪೂರ್ವ ಸಿದ್ಧತೆ ನಡೆದಿದೆ. ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೆ ಆಗ್ರಹ
ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸು ವಂತೆ ಆಗ್ರಹಿಸಿ ನಗರದಲ್ಲಿ ಇಂದು ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲ ಕರು ಹಾಗೂ ವಾಟರ್ ಮ್ಯಾನ್ ಗಳು ಮತ್ತು ಯುಜಿಡಿ ಹೆಲ್ಪರ್ ಗಳು ಪ್ರತಿಭಟನೆ ನಡೆಸಿದರು.