ವಲಸೆ ಮನಸ್ಸುಗಳು…

ವಲಸೆ ಮನಸ್ಸುಗಳು…

ವಲಸೆ ಹಕ್ಕಿಗಳು ಚಂದ, ಆದರೆ
ವಲಸೆ ಮನಸ್ಸುಳು ವಿಕೃತ
ಹೆತ್ತವರು ಮಕ್ಕಳನ್ನು ಎಂದೂ ವಲಸೆ ಮಾಡರು
ಮಕ್ಕಳೇಕೆ ಅವರಿಂದ ವಲಸೆಯಾಗಲು ಬಯಸುವರು?
ವಿದ್ಯಾಭ್ಯಾಸ, ಪ್ರೀತಿ-ಪ್ರೇಮ, ಮದುವೆ, ಖಾಸಗೀತನದ ನೆಪದಡಿ.

ತಂದೆತಾಯಿಯ ಪಾದದಡಿ ಸ್ವರ್ಗವನ್ನು ಕಾಣು
ಗುರುಹಿರಿಯರ ಮಾರ್ಗದಲ್ಲಿ ದೇವರ ಪ್ರತಿರೂಪ ಕಾಣು
ಸಂಸ್ಕಾರವು ಜೀವನದ ಭುನಾದಿಯಾಗಬೇಕು.

ತಾಯಿ ತ್ಯಾಗದ ಪ್ರತಿರೂಪ, ಆಕೆ ಎಂದೂ ತನಗಾಗಿ ಜೀವಿಸೋಲ್ಲ
ತಂದೆ ಶ್ರಮಜೀವಿ, ಆತ ಎಂದೂ ತನಗಾಗಿ ದುಡಿಯೋದಿಲ್ಲ
ಮಕ್ಕಳೇಕೆ ಹೆತ್ತವರಿಗೋಸ್ಕರ ಜೀವಿಸೋಲ್ಲ?

ಹಡೆದವರ ಸಂಪತ್ತಿನ ಪಾಲಿಗಾಗಿ ನಾ ಮುಂದು ನೀ ಮುಂದು,
ಆದರೆ ಅವರ ಪೋಷಣೆಯ ಕಾಲದಲ್ಲಿ ಎಲ್ಲಾರೂ ಹಿಂದೆ
ಏ! ವಲಸೆ ಮನಸ್ಸುಗಳೆ, ನಿಮಗೂ ಬರುವುದು ಕಾಲ.

ಬದಲಾವಣೆ ಜಗದ ನಿಯಮ ಆದರೆ ಒಳ್ಳೆಯ ಬೆಳವಣಿಗೆಯ
ಬದಲಾವಣೆ ಮುಖ್ಯವಲ್ಲವೇ?
ಗುಡಿಸಲ್ಲಿದ್ದರೂ ಮಕ್ಕಳನ್ನು ಹೊರಹಾಕದ ಪೋಷಕರು
ಅರಮನೆ ಕಂಡಾಗ ಮಕ್ಕಳು ಅವರನ್ನು ವೃದ್ಧಾಶ್ರಮದಲ್ಲಿರುಸವರೇಕೆ?

ಏ! ವಲಸೆ ಮನಸ್ಸುಗಳೇ, ಸಾಕು ಮಾಡಿ ಈ ಪರಿ
ತುತ್ತು ಕೊಟ್ಟ ಕೈಗಳನ್ನು ನಿಮ್ಮಿಂದ ಸಿಕ್ಕ ಕಣ್ಣೀರನ್ನೊರೆಸೋಕೆ ಬಿಡದಿರಿ
ಹಾಲುಣಿಸಿದ ಹೆತ್ತವ್ವನ ಹೃದಯವ ಹೊಡೆಯದಿರಿ
ಹೆಣ್ಣು ಬಂಜೆಯಾದರೆ ಒಂದೇ ನೋವು, ತಾಯಿಯಾದರೆ ಸಾವಿರ ನೋವು
ಚಿತೆಯ ಸಮದಲ್ಲೂ ವಲಸೆ ಹೋಗುವ
ಈ ಮನಸ್ಸುಗಳನ್ನು ಸರಿಪಡಿಸುವ ಜವಾಬ್ದಾರಿ ಯಾರದ್ದು? 

ಇದ್ದಾಗ ಕೊಡದ ಅನ್ನ, ಪ್ರೀತಿ,
ಹೋದಾಗ ಎಡೆಯಿಟ್ಟು ಕಣ್ಣೀರಿನ ಧಾರೆಗೆ,
ಹೋದ ಉಸಿರು ಮತ್ತೆ ಮರುಕಳಿಸುವುದೇ?
ಜೀವನದ ಅಂತ್ಯದಲ್ಲಿ ಸಂಪತ್ತೋ? ಸಂಸ್ಕಾರವೋ?
ಜ್ಞಾನೋದಯವೋ? ಎಲ್ಲಾ ಮಾಯವೋ…?


ನೀಮಾ ಡಿ.ಆರ್.
ಇಂಗ್ಲಿಷ್ ಉಪನ್ಯಾಸಕರು,
ದಾವಣಗೆರೆ.
neemadr83@gmail.com

Leave a Reply

Your email address will not be published.