ಮಚ್ಚು ಹಿಡಿದು ಸುತ್ತಾಡಿದ ಯುವಕ ವಿಡಿಯೋ ವೈರಲ್

ದಾವಣಗೆರೆ, ಆ.24- ನಗರದಲ್ಲಿ ಹಾಡಹಗಲೇ ಮಚ್ಚು ಹಿಡಿದು ಸುತ್ತಾಡಿ ಯುವಕನೋರ್ವ ಆತಂಕ ಹುಟ್ಟಿಸಿದ ವಿಡಿಯೋ ಇದೀಗ ವೇರಲ್ ಆಗಿದೆ.

ಪಿ.ಬಿ.ರಸ್ತೆಯ ಬಳಿ ಕುಡಿದ ಅಮಲಿನಲ್ಲಿ ಹಾಡುಹಗಲೇ ಮಚ್ಚು ಹಿಡಿದು ಸುತ್ತಾಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಯುವಕನ ಹೆಸರು ತಿಳಿದು ಬಂದಿ‌ಲ್ಲ. ಬಡಾವಣೆ ಪೊಲೀಸ್ ಠಾಣೆಯ ಕೂಗಳತೆ ಯಲ್ಲಿ ನಿನ್ನೆ ಗಣಪತಿ ವಿಸರ್ಜನೆ ವೇಳೆ ಈ ಘಟನೆ ನಡೆದಿದೆ.

ಪಿ.ಬಿ.ರಸ್ತೆಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಲ್ಲಿಗೆ ಕೆಲಸಕ್ಕೆ ಬಂದಿದ್ದ ಈತ‌ ಕುಡಿದು ಮಚ್ಚು ಹಿಡಿದು ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಎಎಸ್‌ಐ ಮೈಲಪ್ಪ ಸ್ಥಳಕ್ಕೆ ಭೇಟಿ ನೀಡಿ ಬುದ್ಧಿವಾದ ಹೇಳಿ ಕಳುಹಿಸಿರುವುದಾಗಿ ಬಡಾವಣೆಯ ಠಾಣೆಯ ಅಪರಾಧ ವಿಭಾಗದ ಎಸ್‌ಐ ಚಿದಾನಂದಪ್ಪ ತಿಳಿಸಿದ್ದಾರೆ.

Leave a Reply

Your email address will not be published.