ಬದುಕಿವಲ್ಲ…

ಬದುಕಿವಲ್ಲ…

ರಟ್ಟೆಗೆ ಕೆಲಸವಿಲ್ಲ
ಹೊಟ್ಟೆಗೆ ಹಿಟ್ಟಿಲ್ಲ
ಕೈಯಲ್ಲಿ ಕಾಸಿಲ್ಲ
ಆದರೂ ಬದುಕಿವಲ್ಲ.

ಮದುವೆಗಳ ಖುಷಿಯಿಲ್ಲ
ಹಬ್ಬಗಳ  ಸಂಭ್ರಮವಿಲ್ಲ
ಜಾತ್ರೆಗಳ ಸಡಗರವಿಲ್ಲ
ಆದರೂ ಬದುಕಿವಲ್ಲ..

ಹೊಸ ಬಟ್ಟೆಗಳಿಲ್ಲ
ಹೊಸ ಸಿನಿಮಾಗಳಿಲ್ಲ
ಹೊಸ ಭರವಸೆ ಬೆಳಕಿಲ್ಲ
ಆದರೂ ಬದುಕಿವಲ್ಲ.

ಒಳಗಡೆ ಇರುವಂತಿಲ್ಲ
ಹೊರಗಡೆ ಹೋಗುವಂತಿಲ್ಲ
ತ್ರಿಶಂಕು ಸ್ಥಿತಿ ನಮ್ಮದಾಗಿದೆಲ್ಲ
ಆದರೂ ಬದುಕಿವಲ್ಲ.

ಕೈಕುಲುಕದೇ, ಅಪ್ಪಿಕೊಳ್ಳದೇ
ಕೂತೆರಡು ಮಾತನಾಡದೇ
ಹತ್ತಿರವಿದ್ದು ದೂರವಿರುವೆವು
ಆದರೂ ಬದುಕಿವಲ್ಲ.

ಹೊಟ್ಟೆಗೆ ಹಿಟ್ಟಿಲ್ಲ
ಊರ ತುಂಬ ಸಾಲವೆಲ್ಲ
ಕೈಯಲ್ಲಿ ಬಿಡಿಗಾಸಿಲ್ಲ
ಆದರೂ ಬದುಕಿವಲ್ಲ.

ಅನುಕ್ಷಣವೂ ಆತಂಕ
ದಿನ ನಿತ್ಯವೂ ನರಕ
ನಾಳೆ ಹೇಗೋ ಗೊತ್ತಿಲ್ಲ
ಆದರೂ ಬದುಕಿವಲ್ಲ.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
9740050150
shivamurthyh2012@gmail.com

Leave a Reply

Your email address will not be published.