ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಸಾವು

ದಾವಣಗೆರೆ, ಆ.23- ಲಾರಿ‌ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರನೋರ್ವ ಮೃತಪಟ್ಟಿರುವ ಘಟನೆ 

ಇಲ್ಲಿನ ಹದಡಿ ಕೆಳಸೇತುವೆಯ ಬಳಿ ಇಂದು ಬೆಳಿಗ್ಗೆ 10-30ಕ್ಕೆ ನಡೆದಿದೆ.ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಹನುಮಂತಪ್ಪ (36) ಮೃತಪಟ್ಟ ದುರ್ದೈವಿ. ಹಿಂಬದಿ ಕುಳಿತಿದ್ದ ಮಹಿಳೆಗೆ ಗಾಯವಾಗಿದೆ. 

ಈತ ನಗರದ ಗ್ಲಾಸ್‌ ಹೌಸ್ ನಲ್ಲಿ ಕೆಲಸ‌‌ ಮಾಡುತ್ತಿದ್ದ.  ರಾಮಗೊಂಡನಹಳ್ಳಿಯಲ್ಲಿನ ಸಂಬಂಧಿಕರ ಮನೆಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ದಾವಣಗೆರೆ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.