ಸಾಧನೆಗೆ ಅಂಗವಿಕಲತೆ ಅಡ್ಡಿಯಾಗಲಾರದು

ಸಾಧನೆಗೆ ಅಂಗವಿಕಲತೆ ಅಡ್ಡಿಯಾಗಲಾರದು

ಹರಪನಹಳ್ಳಿ : ಎಸ್ಸೆಸ್ಸೆಲ್ಸಿ ಉತ್ತಮ ಸಾಧನೆ ಮಾಡಿದ ಅಭಿಷೇಕ್

ಹರಪನಹಳ್ಳಿ, ಆ.14 – ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪತ್ರಿ ಅಭಿಷೇಕ್  ಅಂಗವಿಕಲನಾಗಿ ದ್ದರೂ ಸಹ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿ, ಸಾಧನೆಗೆ ಅಂಗವಿಕಲತೆ ಅಡ್ಡಿಯಾಗ ಲಾರದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. 

ಇತ್ತೀಚೆಗೆ ಎಲ್ಲಾ ಸೌಕರ್ಯಗಳಿರುವ ವಿದ್ಯಾರ್ಥಿಗಳೇ ಸಾಧನೆ ಮಾಡುವುದು ತೀರ ವಿರಳ. ಅಂತಹವರಲ್ಲಿ ಪಟ್ಟಣದ 12ನೇ ವಾರ್ಡಿನ ಕುರುಬರಗೇರೆಯ ನಿವಾಸಿ ಪತ್ರಿ ಭರ್ಮಪ್ಪ – ಕೆಂಚಮ್ಮ ದಂಪತಿಯ ಪುತ್ರ ಮೂರನೇ ಸುಪುತ್ರ ಪತ್ರಿ ಅಭಿಷೇಕ್ ತನ್ನ ಎರಡು ಕೈಗಳಲ್ಲಿರುವ ಕೇವಲ ಎರೆಡೆರಡು ಬೆರಳುಗಳಿಂದಲೇ ಪರೀಕ್ಷೆ ಬರೆದು ಎಸ್ಸೆಸ್ಸೆಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿ ನನಗೆ ಜಿಲ್ಲಾಧಿಕಾರಿಯಾಗುವ ಕನಸಿದೆ ಎಂದು ಹೇಳುವ ಮೂಲಕ ಭಿನ್ನವಾಗಿ ನಿಂತಿದ್ದಾನೆ.

ಅಭಿಷೇಕ್‍ ಅವರ ತಂದೆ ಪತ್ರಿ ಭರ್ಮಪ್ಪ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಡಿ ಗ್ರೂಪ್ ನೌಕರನಾಗಿದ್ದು, ನನ್ನ ಮಗ ಜಾಣನಿದ್ದಾನೆ. ಅವನು ಎಲ್ಲಿಯ ವರೆಗೂ ಓದುತ್ತಾನೋ ಅಲ್ಲಿಯವರೆಗೂ ಓದಿಸುತ್ತೇನೆ ಎಂದು ಮಗನ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಿದರು.

ಆರ್‍ಟಿಇ ಅಧಿಕಾರಿ ಹಾಗೂ ವಿಜ್ಞಾನ ಶಿಕ್ಷಕ ಬಿ.ಜಯಮಾಲತೇಶ್ ಮಾತನಾಡಿ, ಅಭಿಷೇಕ್ ನಂತಹ ಒಬ್ಬ ಉತ್ತಮ ವಿದ್ಯಾರ್ಥಿಗೆ ವಿಜ್ಞಾನ ಪಾಠ ಬೋಧನೆ ಮಾಡಿದ್ದೇನೆ ಎಂಬ ಹೆಮ್ಮೆ ನನ ಗಿದೆ.ಅಭಿಷೇಕ್‍ಗೆ ತನ್ನ ಎರಡು ಕೈಗಳಲ್ಲಿ ಕೇವಲ ಎರಡೆರಡು ಬೆರಳುಗಳಿವೆ ಎಂದು ಎಂದೂ ಅಂದು ಕೊಂಡವನಲ್ಲ, ಅವನಿಗೆ ಆತ್ಮ ಸ್ಥೈರ್ಯ ಹೆಚ್ಚು. ಆ ಎರಡು ಬೆರಳುಗಳಿಂದಲೇ ಸೈಕಲ್ ಹೊಡೆಯುತ್ತಿದ್ದ ಎಂದು ಅಭಿಷೇಕ್ ಬಗ್ಗೆ ಅಭಿ ಮಾನದ ಮಾತುಗಳನ್ನಾಡಿ, ಅವನಿಗೆ ಪ್ರೋತ್ಸಾಹಿ ಸುವ ಸಲುವಾಗಿ ವೈಯಕ್ತಿಕವಾಗಿ 4000 ರೂ. ಹಣ ಮತ್ತು ಕಲಿಕೆಗೆ ಪೂರಕವಾದ ಸ್ಟಡಿ ಟೇಬಲ್ ಕೊಡಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆಗೈದ ಅಭಿಷೇಕ್‍ಗೆ, ಭವಿಷ್ಯದ ವಿದ್ಯಾಭ್ಯಾಸದ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

Leave a Reply

Your email address will not be published.