ಎಸ್ಸೆಸ್, ಎಸ್ಸೆಸ್ಸೆಂ ಗುಣಮುಖರಾಗಲೆಂದು ನಗರ ದೇವತೆ ದುಗ್ಗಮ್ಮ ದೇವಿಗೆ ಪೂಜೆ

ಎಸ್ಸೆಸ್, ಎಸ್ಸೆಸ್ಸೆಂ ಗುಣಮುಖರಾಗಲೆಂದು ನಗರ ದೇವತೆ ದುಗ್ಗಮ್ಮ ದೇವಿಗೆ ಪೂಜೆ

ದಾವಣಗೆರೆ, ಆ.14- ಶ್ರೀ ಹೊರಟ್ಟಿ ದುರ್ಗಾಂಬಿಕಾ ಸೇವಾ ಟ್ರಸ್ಟ್‌ ಇವರ ಆಶ್ರಯದಲ್ಲಿ ಹಾಗೂ ಗಾಂಧಿ ನಗರದ ಮುಖಂಡರ ನೇತೃತ್ವದಲ್ಲಿ  ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಶಾಮನೂರು ಮಲ್ಲಿಕಾರ್ಜುನ್ ಮತ್ತು ಅವರ ಕುಟುಂಬದವರು ಕೊರೊನಾದಿಂದ ಗುಣಮುಖರಾಗಲೆಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ,  ಶ್ರೀ ಹೊರಟ್ಟಿ ದುರ್ಗಾಂಬಿಕಾ ದೇವಿ ಹಾಗೂ 51 ದೇವರುಗಳಿಗೆ ಪೂಜೆ ಸಲ್ಲಿಸಿದರು. 

ಹರಿಹರದಲ್ಲಿರುವ ಹರಿಹರೇಶ್ವರ ದೇವರಿಗೂ ಗಂಗೆ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಸಿ.ಎಂ.ಹನುಮಂತಪ್ಪ, ಬಿ.ಹೆಚ್.ವೀರಭದ್ರಪ್ಪ, ಬಿ.ಎಂ.ರಾಮಸ್ವಾಮಿ, ಬಿ.ಎಂ.ಈಶ್ವರಪ್ಪ, ಪಿ.ಹನುಮಂತಪ್ಪ, ಬಿ.ಎಂ.ಲಕ್ಷ್ಮಪ್ಪ, ವಾಸುದೇವ ಬಿ.ಎಲ್, ಚಂದ್ರಪ್ಪ, ಬಿ.ಆರ್.ದುರುಗೇಶ್, ಬಿ.ಆರ್.ಶಿವಮೂರ್ತಿ, ಜಿ.ರಾಕೇಶ್, ಬಿ.ಇ.ಮಲ್ಲಿಕಾರ್ಜುನ್ ಪೂಜಾರ್, ಲಕ್ಷ್ಮಣ್ ಪೂಜಾರ್, ರಘು ಪೂಜಾರ್, ಶಂಕರ್ ಪೂಜಾರ್, ಚಂದ್ರು, ಬಿ.ಕೆ.ಮಂಜುನಾಥ್, ಚೇತನ್‌ಕುಮಾರ್ ಹಾಗೂ ಮತ್ತಿತರರಿದ್ದರು.

Leave a Reply

Your email address will not be published.