ಎಲೆಬೇತೂರಿನಲ್ಲಿ ಪಠ್ಯ ಪುಸ್ತಕಗಳ ವಿತರಣೆ

ಎಲೆಬೇತೂರಿನಲ್ಲಿ ಪಠ್ಯ ಪುಸ್ತಕಗಳ ವಿತರಣೆ

ದಾವಣಗೆರೆ,ಆ.14- ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದಿಂದ ಕೊಡುವ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ರೇಣುಕಾ ಕರಿಬಸಪ್ಪ, ಸರ್ಕಾರಿ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಂಪುರ ನಾಗರಾಜ್, ಶಾಲೆಯ ಶಿಕ್ಷಣ ಪ್ರೇಮಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಎಂ.ಷಡಕ್ಷರಪ್ಪ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕವನ್ನು ವಿತರಣೆ ಮಾಡಿದರು.

ಶಾಲೆಯ ಹಿರಿಯ ಶಿಕ್ಷಕರಾದ ಸುಜಾತಾ ಮಕ್ಕಳಿಗೆ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ ಹಾಗೂ ಗ್ರಾಮದಲ್ಲಿ ತೆರಳಿ, ವಠಾರ ಶಾಲೆಯನ್ನು ಆರಂಭಿಸಿದ್ದೇವೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯರಾದ ಶಿವಮೂರ್ತಿ ಹಾಗೂ ಶಿಕ್ಷಕ ವೃಂದದವರಾದ ಅನ್ನಪೂರ್ಣ, ಗಂಗಮ್ಮ, ವಾಣಿ, ಕವಿತ, ಸುಮಿತ್ರಾ, ಶಿಲ್ಪಾ, ಶಶಿಕುಮಾರ್ ಗಣೇಶಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.